ಎಕ್ಸ್‌ಪ್ರೆಸ್‌ವೇ ಯೋಜನೆಗೆ ಮನೆ ತೆರವು ಸೂಚನೆ‌‌ | ಐಶಾರಾಮಿ‌ ಮನೆಯನ್ನು ಕೆಡವಲು ಇಷ್ಟವಿಲ್ಲದೆ ರೈತ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ಪ್ರತಿಯೊಬ್ಬ ವ್ಯಕ್ತಿಯೂ ಮನೆ ನಿರ್ಮಿಸುವಾಗ ಹಲವು ಯೋಚನೆಗಳಿಂದ ಕಟ್ಟುತ್ತಾನೆ. ಹೀಗಾಗಿ ಆತನಿಗೆ ಅದು ಕನಸಿನ ಮನೆ ಆಗಿರುತ್ತದೆ. ಇಂತಹ ಮನೆಗೆ ಒಂಚೂರು ಹಾನಿ ಆದ್ರೂ ಬೇಸರವಾಗುತ್ತೆ. ಅಂತದ್ರಲ್ಲಿ ಮನೆಯನ್ನೇ ಕೆಡವುವಂತೆ ಆದ್ರೆ ಯಾರು ತಾನೇ ಸುಮ್ಮನಿರುತ್ತಾನೆ ಅಲ್ವಾ..

 

ಅದರಂತೆ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಮನೆ ತೆರವು ಸೂಚನೆ‌‌ ಹಿನ್ನೆಲೆ ರೈತನೋರ್ವ ತಮ್ಮ ಮನೆಯನ್ನೇ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ತನ್ನ ಡ್ರೀಮ್ ಹೌಸ್ ಅನ್ನು ಬಿಟ್ಟು ಹೋಗಲು ಮನಸಾಗದೆ ಈತ ತನ್ನ ಐಷರಾಮಿ ಮನೆಯನ್ನು ತನಗೆ ಬೇಕಾದಲ್ಲಿಗೆ ಶಿಫ್ಟ್ ಮಾಡಲು ಯೋಚಿಸಿದ್ದಾನೆ.

ಸಂಗ್ರೂರ್ ಜಿಲ್ಲೆಯ ರೋಶನ್‌ವಾಲಾ ಗ್ರಾಮದ ನಿವಾಸಿ ಸುಖ್ವಿಂದರ್ ಸಿಂಗ್ ಸುಖಿ ಅವರ ಕೋಟ್ಯಂತರ ರೂ. ವೆಚ್ಚದ ಬಂಗಲೆ ಕೆಡವಲು ಅಧಿಕಾರಿಗಳು ಸೂಚಿಸಿದ್ದರು. ‌ಅದಕ್ಕೆ‌ ಪ‌‌ರಿಹಾರವನ್ನು ಕೂಡ ನೀಡಿದ್ದರು.ಆದರೆ ರೋಶನ್‌ವಾಲಾ‌ ಕೋಟ್ಯಾಂತರ ವೆಚ್ಚದ ಕನಸಿನ‌ ಮನೆಯನ್ನು ಕೆಡವದೆ ಅದನ್ನು ಸ್ಥಳಾಂತರ ಮಾಡುತ್ತಿದ್ದಾರೆ.

ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅನುಕೂಲವಾಗುವಂತೆ ಮತ್ತು ಅವರ ಕನಸಿನ ನಿವಾಸವನ್ನು ಉಳಿಸಿಕೊಳ್ಳಲು ಅವರು ತಮ್ಮ ಎರಡು ಅಂತಸ್ತಿನ ಮನೆಯನ್ನು ಅಸ್ತಿತ್ವದಲ್ಲಿರುವ ಸ್ಥಳದಿಂದ 500 ಅಡಿಗಳಷ್ಟು ಹಿಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಅಲ್ಲದೆ,ಈಗಾಗಲೇ 250 ಅಡಿಗಳಷ್ಟು ಈಗಾಗಲೇ ಸ್ಥಳಾಂತರ ಮಾಡಿದ್ದಾರೆ.

ಎರಡು ವರ್ಷಗಳಲ್ಲಿ ಅಪಾರ ಹಣ ಖರ್ಚು ಮಾಡಿ ಈ ಕನಸಿನ ಮನೆಯನ್ನು ನಿರ್ಮಿಸಿದ್ದೆ.ಹಾಗಾಗಿ, ನಾನು ಹೊಸ ಮನೆಯನ್ನು ನಿರ್ಮಿಸಲು ಬಯಸಲಿಲ್ಲ.ಇರುವ ಈ ಮನೆಯನ್ನು ಎಕ್ಸ್‌ಪ್ರೆಸ್‌ವೇಯಿಂದ ದೂರ ಸರಿಸಲು ನಿರ್ಧರಿಸಿದೆ. ನಾನು ನನ್ನ ಮನೆಯನ್ನು 500 ಅಡಿ ಹಿಂದಕ್ಕೆ ಸರಿಸಬೇಕಾಗಿದೆ.ನಾವು ಈಗಾಗಲೇ 250 ಅಡಿ ಹಿಂದಕ್ಕೆ ತಳ್ಳಿದ್ದೇವೆ ಮತ್ತು ಕೆಲಸ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮನೆಯನ್ನು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ.ಕಳೆದ ಎರಡು ತಿಂಗಳಿಂದ ಈ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ 2ತಿಂಗಳು ಬೇಕು.ಕಾರ್ಮಿಕರು ಇದನ್ನು ಪ್ರತಿದಿನ ಸುಮಾರು 10 ಅಡಿಗಳಷ್ಟು ಮುಂದಕ್ಕೆ ತರಲು ಸಾಧ್ಯವಾಗುತ್ತದೆ.

ಅಂದಹಾಗೆ ಈ ಮನೆಯನ್ನು ಸ್ಥಳಾಂತರಿಸಲು ಒಟ್ಟು 50 ಲಕ್ಷ ರೂ.ಬೇಕು ಎಂದು ತಿಳಿದುಬಂದಿದೆ. ಒಟ್ಟಾರೆ ತನ್ನ ಕನಸಿನ ಮನೆ ಕಳೆದುಕೊಳ್ಳಲು ಇಷ್ಟವಿಲ್ಲದೆ ದುಡ್ಡಿಗೆ ಅಂಜದೆ ಕನಸಿನ ಮನೆ ಉಳಿಸಿಕೊಳ್ಳಲು ಹೊರಟಿದ್ದಾರೆ.

Leave A Reply

Your email address will not be published.