ಎಳನೀರನ್ನು ಕುಡಿದು ಹಾಗೆ ಎಸೆಯೋ ಮುಂಚೆ ತಿಳಿಯಿರಿ ಗಂಜಿಯಲ್ಲಿರುವ ಇಷ್ಟೊಂದು ಉಪಯೋಗ!

ಭಾರತದಲ್ಲಿ ಎಳನೀರಿಗೆ ಆಧ್ಯತೆ ಮತ್ತು ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ತುಳುನಾಡಿನಲ್ಲಿ ಒಂದು ಕೈ ಮೇಲೆನೇ ಅನ್ನಬಹುದು. ಎಲ್ಲಾ ತಂಪು ಪಾನೀಯಕಿಂತಲೂ ಶ್ರೇಷ್ಠವಾದ ಎಳನೀರು, ದೇಹವನ್ನು ಹೈಡ್ರಿಕರಿಸುತ್ತದೆ. ಮಾತ್ರವಲ್ಲ, ಉತ್ತಮ ಆರೋಗ್ಯ ಒದಗಿಸುತ್ತದೆ. ಎಳನೀರಿನಿಂದ ಹಲವು ಆರೋಗ್ಯಕರ ಮತ್ತು ಪ್ರಯೋಜನಕಾರಿಯಾಗಿದೆ.

ಇದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಬಹುದಾಗಿದೆ. ಇದು ನಮ್ಮ ದೇಹದ ಸೌಂದರ್ಯ ಹೆಚ್ಚಿಸಬಹುದಾಗಿದ್ದು, ಆರೋಗ್ಯ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಬಹಳ ಹಿಂದೆ ಚರ್ಮದ ಬಳಕೆಗೆ ಸೌಂದರ್ಯವರ್ಧಕಗಳು ಇರಲಿಲ್ಲ. ಅವಾಗ ದೇಹ ಶುದ್ಧ ಮಾಡಿಕೊಳಲ್ಲೂ ಮೂರು ದಿವಸ ಎಳನೀರು ಸೇವಿಸಿ ಚರ್ಮದ ಸೌಂದರ್ಯ ಕಾಪಾಡಿ ಕೊಳ್ಳುತಿದ್ದರು ನಾಟಿ ವೈದ್ಯರು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಆದ್ರೆ, ನಾವೆಲ್ಲ ಕೇವಲ ಎಳನೀರು ಮಾತ್ರ ಕುಡಿದು ಅದರ ಗಂಜಿಯನ್ನ ಬಿಸಾಡುತ್ತೇವೆ. ಇದರಿಂದಲೂ ಅದೆಷ್ಟು ಪ್ರಯೋಜನ ಇದೆ ಎಂಬುದು ಯಾರಿಗೂ ತಿಳಿದಿಲ್ಲ. ಹೌದು. ಇದರಿಂದ ಅತ್ಯುತ್ತಮ ಉಪಯೋಗವಿದ್ದು, ಏನೆಲ್ಲಾ ಉಪಯೋಗವಿದೆಯೆಂದು ಇಲ್ಲಿ ನೋಡಿ..

*ತೂಕ ನಷ್ಟ :
ತೆಂಗಿನಕಾಯಿ ತಿನ್ನುವುದರಿಂದ ಪ್ರೊಟೀನ್ ಕ್ಯಾಲೋರಿಗಳು ಹೆಚ್ಚಾಗುತ್ತದೆ. ಇದು ಬೊಜ್ಜನು ಎಚ್ಚಗಿಸುತ್ತದೆ ಎಂದು ನಂಬುತಾರೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ ಇದು ತಪ್ಪು ತಿಳುವಳಿಕೆ.ನೀವು ಕಡಿಮೆ ಪ್ರಮಾಣದಲ್ಲಿ ತೆಂಗಿನಕಾಯಿ ಸೇವಿಸುವುದರಿಂದ ನಿಮ್ಮ ಸೊಂಟ ಮತ್ತು ಕೊಬ್ಬನ್ನು ಕ್ರಮೇಣ ಕರಗಿಸಬಹುದು ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆ:
ಅಜೀರ್ಣ ಸಮಸ್ಯೆ ಇರುವವರು ಎಳನೀರಿನ ಗಂಜಿ/ಕಾಯಿ ತಿನ್ನಬೇಕು. ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸೂಪರ್‌ಫುಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ನಮ್ಮ ಕರುಳನ್ನು ಸಹ ಆರೋಗ್ಯವಾಗಿಡುತ್ತದೆ.

  • ರೋಗನಿರೋಧಕ ಶಕ್ತಿ ಹೆಚ್ಚಳ:
    ಕರೋನಾ ಅವಧಿಯ ನಂತರ, ಜನರು ತಮ್ಮ ರೋಗನಿರೋಧಕ ಶಕ್ತಿಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಳನೀರಿನ ಗಂಜಿ/ಕಾಯಿಯನ್ನು ತಿನ್ನುವುದರಿಂದ ಅದರಲ್ಲಿ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಮುಖದ ಕಾಂತಿ ಹೆಚ್ಚಳ:
    ಬೇಸಿಗೆಯಲ್ಲಿ ಮತ್ತು ತೇವಾಂಶದ ತಾಪಮಾನದಲ್ಲಿ ನಮ್ಮ ಮುಖದ ಚರ್ಮವು ಹವಾಮಾನದಿಂದ ಕೆಟ್ಟದಾಗಿ ಹೊಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಎಳನೀರಿನ ಗಂಜಿ ಅಥವಾ ಕಾಯಿಯನ್ನು ಸವಿಯುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಜೊತೆಗೆ ಆಂಟಿ ಏಜಿಂಗ್ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.

ಶಕ್ತಿಯ ಮೂಲ:
ಬೇಸಿಗೆ ಕಾಲದಲ್ಲಿ, ಸುಡುವ ಬಿಸಿಲು, ಆರ್ದ್ರತೆ ಮತ್ತು ಬೆವರಿನಿಂದ ದಣಿದ ಭಾವ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಎಳನೀರು, ಅದರ ಗಂಜಿ/ ಕಾಯಿಯನ್ನು ಸವಿಯುವುದರಿಂದ ನಿಮ್ಮ ದೇಹದಲ್ಲಿ ಶಕ್ತಿಯು ಹರಡುತ್ತದೆ. ಹಾಗಾಗಿ ಇದನ್ನು ಇನ್ಸ್ಟಾ ಎನರ್ಜಿ ಬೂಸ್ಟರ್ ಎಂತಲೂ ಕರೆಯುತ್ತಾರೆ.

ಇಷ್ಟೇ ಅಲ್ಲದೆ, ಎಳನೀರು ಒಂದು ರೀತಿಯಲ್ಲಿ ಪ್ಯಾಕೆಜ್ ಮಾಡಿದ ಆಹಾರ. ಅತ್ತ ಪಾನೀಯ ಕೂಡಾ ಹೌದು, ಇತ್ತ ಘನ ಆಹಾರ ಕೂಡಾ ಇದೆ, ಅಲ್ಲದೆ ಎಲ್ಲಿಗೆ ಬೇಕೆಂದರಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಿ ಬಳಸಬಲ್ಲ ಆಹಾರದ ಮತ್ತು ಪೌಷ್ಟಿಕಾಂಶಗಳ ಪೊಟ್ಟಣ ಈ ಎಳನೀರು.

Leave A Reply

Your email address will not be published.