ಮತ್ತೆ ರಾತ್ರಿ ಕಂಪಿಸಿದ ಭೂಮಿ | ಆತಂಕದಿಂದ ಮನೆಯಿಂದ ಆಚೆ ಬಂದ ಜನ

ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೆ ಭೂಮಿ ನಡುಗಿದ ಅನುಭವವಾಗಿದೆ. ಶನಿವಾರ ರಾತ್ರಿ 8.16 ಕ್ಕೆ ಭೂಕಂಪದ ಅನುಭವಾಗಿದೆ. ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆಸ್ತಿಪಾಸ್ತಿ ನಷ್ಟದ ಬಗ್ಗೆಯೂ ವರದಿಯಾಗಿಲ್ಲ.

 

ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಭೂಮಿ ನಡುಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಮೇಲಿಂದ ಮೇಲೆ ಭೂಕಂಪನ ಆಗುತ್ತಿರೋದಕ್ಕೆ ಜನ ಭಯಭೀತರಾಗಿದ್ದಾರೆ. ಈ ಮಧ್ಯೆ ಭೂಕಂಪನದ ತೀವ್ರತೆಯ ಬಗ್ಗೆ ಜಿಲ್ಲಾಡಳಿತ ಇನ್ನಷ್ಟೇ ಅಧಿಕಧೃತ ಮಾಹಿತಿ ನೀಡಬೇಕಿದೆ.

Leave A Reply

Your email address will not be published.