ತಲೆಗೆ ಗಾಯ ಆದ ಜಾಗಕ್ಕೆ ಹತ್ತಿ ಇಡಬೇಕಾದಲ್ಲಿ “ಕಾಂಡೋಮ್​” ಇಟ್ಟ ಆಸ್ಪತ್ರೆ!!!

ತಲೆಗೆ ಗಾಯಮಾಡಿಕೊಂಡು ಬಂದ ಮಹಿಳೆಯೋರ್ವರ ತಲೆಗೆ ಬ್ಯಾಂಡೇಜ್ ಜೊತೆಗೆ ಕಾಂಡೋಂ ಇಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ಬಂದಿದೆ.

 

ಸರಕಾರಿ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು. ತಲೆಗೆ ಗಾಯಮಾಡಿಕೊಂಡ ಮಹಿಳೆಗೆ ರಕ್ತ ಕ್ಲೀನ್ ಮಾಡಿ ಅಲ್ಲಿಗೆ ಹತ್ತಿ ಬದಲು ಕಾಂಡೋಂ ಇಟ್ಟಿದ್ದು ನಿಜಕ್ಕೂ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು.

ತಲೆಗೆ ಗಾಯ ಮಾಡಿಕೊಂಡ ಮಹಿಳೆಯೋರ್ವಳು ಸಮುದಾಯ ಜಿಲ್ಲಾಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ನಡೆದಿದೆ. ಮಹಿಳೆಯ ತಲೆಗೆ ಹಾಕಿದ ಬ್ಯಾಂಡೇಜ್​ ತೆಗೆದಾಗ ಕಾಂಡೋಂ ರ‍್ಯಾಪರ್​ ಕಂಡು ಡಾಕ್ಟರ್ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ವೀಡಿಯೋ ವೈರಲ್‌ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆಗೆ ಆದೇಶ ನೀಡಲಾಗಿದೆ.

ಮೊರೆನಾ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪ್ರಾಥಮಿಕ, ಉಪ ಆರೋಗ್ಯ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಸಿವಿಲ್ ಆಸ್ಪತ್ರೆ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ಹದಗೆಟ್ಟಿದ್ದು, ಸಾಮಾನ್ಯ ಪ್ರಕರಣಗಳಲ್ಲಿಯೂ ಚಿಕಿತ್ಸೆ ನೀಡದೆ ನೇರವಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಮಹಿಳೆಗೂ ಅದೇ ರೀತಿ ಆಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ತಲೆಗೆ ಹೊಲಿಗೆಗಳನ್ನು ಹಾಕದೆ ಬ್ಯಾಂಡೇಜ್​ ಅಷ್ಟೇ ಹಾಕಿ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.

ಮಹಿಳೆ ಆಸ್ಪತ್ರೆಗೆ ಬಂದಾಗ ಬ್ಯಾಂಡೇಜ್​ ಸರಿಯಾಗದೆ ರಕ್ತ ಸೋರಿಕೆಯಾಗುತ್ತಿತ್ತು. ಗಾಯ ಸ್ವಚ್ಛಗೊಳಿಸಿ ಹೊಲಿಗೆ ಹಾಕಲು ಜಿಲ್ಲಾಸ್ಪತ್ರೆಯ ವೈದ್ಯರು ಬ್ಯಾಂಡೇಜ್​ ತೆಗೆದು ನೋಡಿದಾಗ ಹತ್ತಿ ಇಡಬೇಕಾದಲ್ಲಿ ಕಾಂಡೋಮ್​ ರ‍್ಯಾಪರ್​ ಇಟ್ಟು ಬ್ಯಾಂಡೇಜ್​ ಮಾಡಿರುವುದು ಬೆಳಕಿಗೆ ಬಂದಿದೆ.

ಆದರೆ ಶುಕ್ರವಾರ ರಾತ್ರಿ ನಡೆದ ಈ ಘಟನೆಯನ್ನು ಲಘುವಾಗಿ ಪರಿಗಣಿಸಲಾಗಿತ್ತು. ವೀಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ ರಾಕೇಶ್ ಶರ್ಮಾ ಅವರು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬ್ಲಾಕ್ ವೈದ್ಯಾಧಿಕಾರಿ ಪೊರ್ಸಾ, ಡಾ.ಪುಷ್ಪೇಂದ್ರ ದಂಡೋತಿಯಾ ಅವರಿಗೆ ಸೂಚಿಸಿದ್ದಾರೆ.

Leave A Reply

Your email address will not be published.