ಫುಲ್ ಟೈಟ್ ಆಗಿ ವಿದ್ಯುತ್ ಕಂಬವನ್ನೇ ಏರಿ ಕುಳಿತ ಕುಡುಕ!

Share the Article

ಎಣ್ಣೆರಾಯ ಹೊಟ್ಟೆಯೊಳಗೆ ನುಸುಳಿದ ಅಂದ್ರೆ ಸಾಕು ಆ ವ್ಯಕ್ತಿಯ ವರ್ತನೆನೇ ಬದಲಾಗಿರುತ್ತೆ. ಅವರು ಏನೂ ಮಾಡ್ತಾ ಇದ್ದಾರೆ ಅನ್ನೋ ಪರಿಜ್ಞಾನನೇ ಇರೋದಿಲ್ಲ. ಅಂತದ್ರಲ್ಲಿ ಇಲ್ಲೊಬ್ಬ ಕುಡುಕ ಅಮಲಿನಲ್ಲಿ ಮಾಡಿದ್ದು ಎಂತ ಕೆಲಸ ಗೊತ್ತಾ.? ಇವನ ಈ ಸಾಹಸದಿಂದ ಉಳಿದವರಿಗೆ ಸುಸ್ತೋ ಸುಸ್ತು.

ಹೌದು. ಪಾನಮತ್ತನಾಗಿದ್ದ ಯುವಕನೊಬ್ಬ ಹೈ-ವೋಲ್ಟೇಜ್​ ವಿದ್ಯುತ್ ಕಂಬಕ್ಕೇರಿ, ಗಂಟೆಗಟ್ಟಲೆ ಅಲ್ಲೇ ಇದ್ದು ಕೆಳಗೆ ಇಳಿಯದೆ ಸತಾಯಿಸಿದ ಘಟನೆ ನಡೆದಿದೆ. ಯುವಕನ ಹೆಸರು ಅನಂತ ರಾಜ್ ಎಂದು ತಿಳಿದುಬಂದಿದೆ.

ಈತ ಮಾರಗೊಂಡನಹಳ್ಳಿ ಸಮೀಪ ನಿನ್ನೆ ಸಂಜೆ ಐದು ಗಂಟೆಗೆ ವಿದ್ಯುತ್ ಕಂಬವನ್ನೇರಿದ್ದ. ಇದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಆತನನ್ನು ಕೆಳಕ್ಕೆ ಇಳಿಸಲು ಹರಸಾಹಸ ನಡೆಸಿದರು.

ಆದ್ರೆ ಆತ ಮಾತ್ರ ರಾತ್ರಿ 11ರ ವರೆಗೂ ಕಂಬದಿಂದ ಇಳಿದಿಲ್ಲ. ಹೇಗಾದ್ರು ಪೇಚಾಡಿ ಪೇಚಾಡಿ ಕೊನೆಗೂ ಈತನನ್ನು ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಆನೇಕಲ್-ಚಂದಾಪುರ ಭಾಗದವ ಎನ್ನಲಾಗಿದ್ದು, ಈತನನ್ನು ಆವಲಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ರಾಜಧಾನಿ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

Leave A Reply