‘ತರಗತಿಯಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ’ ಎಂದ ಮುಸ್ಲಿಂ ಸಂಘಟನೆಯ ಮುಖಂಡ!

ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರ ಬರುತ್ತಿರುವಂತೆಯೇ ‘ದ್ವೇಷ ರಾಜಕಾರಣ’ದ ಕಿಚ್ಚೂ ಹೆಚ್ಚುತ್ತಿದ್ದು, ಪ್ರತಿಯೊಂದರಲ್ಲೂ ವಿಷಯವೂ ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಬೇರೆಯೇ ಚರ್ಚೆ ನಡೆಯುತ್ತಿದೆ.

 

ಹೌದು. ಕೇರಳದ ಮುಸ್ಲಿಂ ಸಂಘಟನೆಯೊಂದರ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದು, ತರಗತಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ ಎಂಬುದಾಗಿ ಹೇಳಿದ್ದಾರೆ.

ಕೇರಳದಲ್ಲಿ ಅಲ್ಲಿನ ಸರ್ಕಾರ ಲಿಂಗಭೇದವಿಲ್ಲದ ಶಿಕ್ಷಣ ವ್ಯವಸ್ಥೆ ಪರಿಚಯಿಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ, ಕೇರಳದ ಇಂಡಿಯನ್​ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್​) ಸಂಘಟನೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಈ ಹೇಳಿಕೆ ನೀಡಿದ್ದಾರೆ.

ತರಗತಿಯಲ್ಲಿ ಹುಡುಗ-ಹುಡುಗಿಯರನ್ನು ಒಟ್ಟಿಗೆ ಕುಳ್ಳಿರಿಸುವ ಅಗತ್ಯ ಏನಿದೆ? ಯಾಕೆ ನೀವು ಅವರಿಗೆ ಅಂಥ ಅವಕಾಶ ಕಲ್ಪಿಸಿಕೊಡುತ್ತಿದ್ದೀರಿ? ಹಾಗೆ ಮಾಡುವುದು ಅಪಾಯಕಾರಿ. ಅದು ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಚಲಿತಗೊಳಿಸುವುದಷ್ಟೇ ಅಲ್ಲ, ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಲಿಂಗಭೇದ ಇಲ್ಲದಿರುವುದು ಧಾರ್ಮಿಕ ವಿಷಯವಲ್ಲ, ಅದು ನೈತಿಕ ವಿಷಯ. ಇದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಿದೆ. ನಾವು ಇದನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.

Leave A Reply

Your email address will not be published.