ನೆಲದಲ್ಲಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ದಾರುಣ ಸಾವು !!!

Share the Article

ಪೋಷಕರೇ ಇದೊಂದು ಎಚ್ಚರಿಕೆಯ ಸಂದೇಶ ಎಂದೇ ಹೇಳಬಹುದು. ಪುಟ್ಟ ಮಕ್ಕಳನ್ನು ಎಷ್ಟೇ ಜಾಗೃತೆಯಿಂದ ನೋಡಿದರೂ ಸಾಲದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ತಂದೆ ತಾಯಿ ಅಥವಾ ಪೋಷಕರೇ ಈ ಸುದ್ದಿ ನಿಮಗಾಗಿ. ಯಾವುದೇ ಹಾನಿಕಾರಕ ವಸ್ತುಗಳನ್ನು ಮಕ್ಕಳಿಗೆ ಎಟಕುವ ಹಾಗೇ ಇಡಬಾರದು. ಇಲ್ಲೊಂದು ಮಗು ಹಾಗೇ ಇಟ್ಟ ವಸ್ತುವನ್ನು ಕುಡಿದು ನಂತರ ಸಾವನ್ನಪ್ಪಿದೆ.

ಹೌದು, ಎರಡು ವರ್ಷದ ಮಗುವೊಂದು ಮನೆಯಲ್ಲಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದು ಸಾವನ್ನಪ್ಪಿರುವ ದಾರುಣ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.

ಮಹೇಶ್ ನಾಯ್ಕ ಹಾಗೂ ಶಿಲ್ಪ ದಂಪತಿಯ 2 ವರ್ಷದ ಮಗು ಕುಮಾರ್ ಆರವ್ ಮಹೇಶ ನಾಯ್ಕ (2) ಸಾವಿಗೀಡಾಗಿರುವ ಮಗು.

ನೆಲದ ಮೇಲೆ ಇಟ್ಟಿದ್ದ ಆಲ್ ಔಟ್ ಮಸ್ಕಿಟೋ ಲಿಕ್ವಿಡ್ ಅನ್ನು ಕುಡಿದ ಮಗು ನಂತರ ಅಸ್ವಸ್ಥಗೊಂಡಿದೆ. ಇದನ್ನು ಕಂಡು ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ 2 ವರ್ಷದ ಮಗು ಆರವ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply