ಎಲೆಕ್ಟ್ರಿಕ್ ವಾಹನ ಕೊಳ್ಳುವ ಮುಂಚೆ ಯೋಚಿಸಿ… ಅದರ ಬೆಲೆ…ರೇಂಜ್..ಬ್ರಾಂಡ್…!
ಕೋವಿಡ್ -19 ನಂತರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಒಮ್ಮೆಲೆ ಗಗನಕ್ಕೆ ಏರಿದೆ.ಇದರ ಪರಿಣಾಮ ಅನೇಕ ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿ ನಷ್ಟ ಅನುಭವಿಸಿದರು. ಅನೇಕ ಬಡ ಜನರಿಗೂ ಹೊರೆ ಆಯಿತು. ಆಗಲೇ ನೋಡಿ ಭಾರತೀಯ ಮಾರುಕಟ್ಟೆಗೆ ಹೆಜ್ಜೆ ಇಟ್ಟಿತು ದೈತ್ಯ ಎಲೆಕ್ಟ್ರಿಕ್ ವಾಹನ ತಯಾರಕರ ಕಂಪೆನಿಗಳಾದ ಅಥರ್, ಒಲಾ, ಬೌನ್ಸ್, ಓಕಿನವ ಇತ್ಯಾದಿ ಕಂಪನಿಗಳು. ಈಗಎಲೆಟ್ರಿಕ್ ವಾಹನ ಕೊಳ್ಳೋದು ಒಂದು ಕ್ರೇಜ್ ಆಗಿದೆ. ಆದರೆ ಆ ಕ್ರೇಜ್ ನ ಹಿಂದೆ ಎಷ್ಟೋ ಜನರಿಗೆ ಅರಿವಿರದ ಒಂದು ಲೆಕ್ಕಾಚಾರ ಇದೆ. ಅದರ ಬಗ್ಗೆ ಈ ಸಣ್ಣ ಪೋಸ್ಟ್.
ಎಲೆಕ್ಟ್ರಿಕ್ ವಾಹನ ಬಳಕೆಯಿಂದ ಉಳಿತಾಯ ಹೇಗೆ..?
ಸಾಮಾನ್ಯವಾಗಿ ನಾವು ಬಳಸುವ ಗೇರ್ ಸಹಿತ ದ್ವಿಚಕ್ರ ವಾಹನ 35 ರಿಂದ 50 ಕಿ. ಮೀ ಪ್ರತಿ ಲೀಟರ್ ಗೆ ಕೊಡುವ ಮೈಲೇಜ್, ಅಂದರೆ ಅಂದಾಜು ಪ್ರತಿ ಒಂದು ಕಿಲೋ ಮೀಟರ್ ಗೆ 2 ರೂ – 3 ರೂ ತಗಲುತ್ತದೆ
ನಾವು ನಿತ್ಯ ಸರಿಸುಮಾರು 50 ಕಿ. ಮೀ ವಾಹನ ಚಲಾಯಿಸಿದರೆ ತಿಂಗಳಿಗೆ ಅಂದಾಜು 1500 ಕಿ. ಮೀ ಓಡಿಸುತ್ತೇವೆ. ಇದಕ್ಕೆ ತಗಲುವ ಅಂದಾಜು ವೆಚ್ಚ 3000 ರೂ ರಿಂದ 4500 ರೂಪಾಯಿ.
ಅಂದರೆ ಪ್ರತಿ ವರ್ಷ 36,000 ರಿಂದ 54000 ರೂಪಾಯಿ. ಇದರ ಜೊತೆಗೆ ನಾವು ಪ್ರತಿ 2000 ಸಾವಿರ ಕಿಲೋ ಮೀಟರ್ ಗೆ ಒಮ್ಮೆ ಎಂಜಿನ್ ಆಯಿಲ್ ಬದಲಿಸಿದರೆ ಅದರ ಅಂದಾಜು ವೆಚ್ಚ 5000 ಸಾವಿರ. ಹೀಗೇ ಒಂದು ವರ್ಷಕ್ಕೆ 40,000 ಸಾವಿರ ರಿಂದ 58,000 ರೂಪಾಯಿಗಳು ಕಂತು ಕಂತಿನ ಮೂಲಕ ನಮ್ಮ ಜೇಬಿನಿಂದ ಪರ್ಸಿನಿಂದ ಅಥವಾ ಖಾತೆಯಿಂದ ಕಳೆದು ಹೋಗುತ್ತದೆ.
ಇದೀಗ ನಾವು ಎಲೆಕ್ಟ್ರಿಕ್ ವಾಹನಕ್ಕೇ ಬಂದರೆ : ಒಲಾ, ಅತೆರ್ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಪ್ರತಿ ಚಾರ್ಜ್ ಗೆ 80 ರಿಂದ 140 ಕಿ. ಮೀ ರೇಂಜ್ ಕೊಡುತ್ತವೆ.
ಅಂದರೆ ಒಮ್ಮೆ ಚಾರ್ಜ್ ಮಾಡಿದರೆ 80 ಕಿ. ಮೀ ರಿಂದ 140 ಕಿ. ಮೀ ಚಲಿಸುತ್ತೆ. ಒಮ್ಮೆ ಚಾರ್ಜ್ ಮಾಡಲು ಎರಡು ಯೂನಿಟ್ ವಿದ್ಯುತ್ ಬಳಕೆ ಆಗುತ್ತೆ ಅಂದರೆ ಕೇವಲ 12 ರಿಂದ 15 ರೂಪಾಯಿ. ಅಂದರೆ ಪ್ರತಿ ಕಿಲೋ ಮೀಟರ್ ಗೆ ತಾಗುವ ವೆಚ್ಚ 10 ರಿಂದ 15 ಪೈಸೆ. ಒಂದು ತಿಂಗಳಿಗೆ ತಗಲುವ ವೆಚ್ಚ 150 ರಿಂದ 200 ರೂಪಾಯಿ ಅಷ್ಟೇ.
ಒಂದು ವರ್ಷಕ್ಕೆ ತಗಲುವ ವೆಚ್ಚ ಕೇವಲ 1800 ರಿಂದ 2500 ರೂಪಾಯಿ. ಆದರೆ ಕೊಳ್ಳುವ ಮುನ್ನ ತಪ್ಪದೆ ಅಧ್ಯಯನ ಮಾಡಿ. ಅದರ ಬೆಲೆ, ರೇಂಜ್ ಮತ್ತು ಬ್ರಾಂಡ್ ಕೂಡಾ ಗಮನಿಸಿ.
ನಾವು ಅಲ್ಲಿ ತಿಂಗಳಿಗೆ ಪೆಟ್ರೋಲ್ ಗೆ ಬಳಸುವ ಹಣವನ್ನು ಇಲ್ಲಿ ನಾವು ಎಲೆಕ್ಟ್ರಿಕ್ ವಾಹನ ಖರೀದಿಸಿ ಅದರ EMI ಕಟ್ಟಬಹುದು. ಅದೇ ಎಲೆಕ್ಟ್ರಿಕ್ ವಾಹನ ಕೊಳ್ಳುವ ಹಿಂದಿನ ಜಾಣತನ. ಇದು ದ್ವಿಚಕ್ರ ವಾಜನಗಳಿಗೆ ಮಾತ್ರವಲ್ಲ, ಕಾರುಗಳ ಖರೀದಿ ಹಿಂದೆ ಕೂಡಾ ಇಂತದ್ದೇ ಅಕೌಂಟಿಂಗ್ ಇದೆ. ಹೆಚ್ಚಿನ ಜನರಿಗೆ ಈ ಲೆಕ್ಕಾಚಾರ ಗೊತ್ತಿಲ್ಲದೇ ಇದ್ದರೂ, ಅದೇನೋ ಕ್ರೇಜ್ ಎಂಬಂತೆ ಎಲೆಕ್ಟ್ರಿಕ್ ವಾಹನ ಕೊಳಲು ಮುಂದೆ ಬರ್ತಿದ್ದಾರೆ. ಅದು ಕ್ಲೀನ್ ಫ್ಯುಯೆಲ್, ಮಾಲಿನ್ಯ ಕಮ್ಮಿ ಎಂಬಿತ್ಯಾದಿ ಕಾರಣದಿಂದ ಇರಬಹುದು. ಗೆಳೆಯರ ಮುಂದೆ , ”ನೋಡಪ್ಪ, EV ಗಾಡಿ ಎತ್ತಾಕ್ಕೊಂಡೆ, ಹೆಂಗಿದ್ಯೋ, ಪೆಟ್ರೋಲ್ ಹಾಕಂಗೆ ಇಲ್ಲಾ, ಓಡ್ತಾನೇ ಇರತ್ತೆ !! ” ಎಂದು ಹೆಮ್ಮೆಯಿಂದ ಬೀಗಲು ಕೂಡಾ EV ಗಾಡಿಗಳು ಹೇಳಿ ಮಾಡಿಸಿದ ಉತ್ಪನ್ನಗಳು.
ಎಲೆಕ್ಟ್ರಿಕ್ ವೆಹಿಕಲ್ ಮುಂದೆ ಒಂದು ದಿನ ದೊಡ್ಡ ಕ್ರಾಂತಿ ಮಾಡುವಲ್ಲಿ ಯಾವುದೇ ಸಂದೇಹವಿಲ್ಲ. ಅದರ ಬಗ್ಗೆ ನೀವು ಕೂಡಾ ಹೆಚ್ಚೆಚ್ಚು ತಿಳ್ಕೊಳ್ಳಿ. ಲೆಕ್ಕಾಚಾರ ಮಾಡಿ. ಮುಂದೊಂದು ದಿನ ನಿಮ್ಮ ಮನೆಮುಂದೆ EV ಗಾಡಿ ಮಿಂಚುತ್ತಾ ಬಂದು ನಿಲ್ಲತ್ತೆ. ನೀವು ಒಂದು ಸಹಜ, ಸಣ್ಣ ಅಹಮಿಕೆಯಿಂದ ಮುಖ ಬೆಳಗಿಸಿಕೊಳ್ಳುವ ದಿನ ದೂರವಿಲ್ಲ.