ನಾನು ಯಾವ ಮದುವೆ ಆಗಲ್ಲ, ಇಂಡಸ್ಟ್ರೀಲಿ ಬೆಳೆಯಬೇಕು; ಸೋನು ಶ್ರೀನಿವಾಸ್ ಗೌಡ

ರಾಕೇಶ್ ಅಡಿಗ ‘ಬಿಗ್ ಬಾಸ್ ಒಟಿಟಿ’ ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜತೆ ಫ್ಲರ್ಟ್​ ಮಾಡುತ್ತಾ ಇರುತ್ತಾರೆ. ಸೋನು ಗೌಡ ಜತೆ ಅವರು ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗ ಪ್ರೀತಿ ಮದುವೆ ಬಗ್ಗೆ ಮಾತನಾಡುತ್ತಾ ಇರುತ್ತಾರೆ.

 

ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಕ್ಕೆ ಈಗಲೂ ಟ್ರೋಲ್ ಆಗುತ್ತಿದ್ದಾರೆ. ಅವರು ಸಣ್ಣ ಮಕ್ಕಳಂತೆ ಆಡುತ್ತಾರೆ ಎಂಬುದು ಕೆಲವರು ಆರೋಪ. ಇನ್ನೂ ಕೆಲವರಿಂದ ಅವರಿಗೆ ಬೆಂಬಲ ಸಿಗುತ್ತಿದೆ. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆ ಆಗುವುದಿಲ್ಲ ಎಂಬುದನ್ನು ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರ ಕೇಳಿ ಸ್ಫೂರ್ತಿ ಗೌಡ ಅವರು ನಕ್ಕಿದ್ದಾರೆ.

ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ’ ಎಂದು ಸೋನುಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಸೋನು ನೇರವಾಗಿ ಉತ್ತರಿಸಿದರು. ‘ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್​ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್​ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ ಏಳು ವರ್ಷ ವಿವಾಹ ಆಗಲ್ಲ. ನಾನು ಇಂಡಸ್ಟ್ರೀಲಿ ಬೆಳೆಯಬೇಕು’ ಎಂದರು ಸೋನು.

ಸೋನುಗೆ ಹೀರೋಯಿನ್ ಆಗಬೇಕು ಎಂಬ ಕನಸಿದೆ. ಈ ಮೊದಲು ಶಾರ್ಟ್​ಮೂವಿಗಳಲ್ಲಿ ಅವರು ನಟಿಸಿದ್ದರು. ಬಿಗ್ ಬಾಸ್ ವೇದಿಕೆ ಏರಿದಾಗಲೂ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದರು. ಬಿಗ್ ಬಾಸ್​ನಿಂದ ಒಂದಷ್ಟು ಜನಪ್ರಿಯತೆ ಸಿಕ್ಕರೆ ಅದರಿಂದ ಒಂದಷ್ಟು ಆಫರ್​ಗಳು ಬರಬಹುದು ಎಂಬುದು ಅವರ ನಂಬಿಕೆ..

Leave A Reply

Your email address will not be published.