ರಾಯಲ್ ಎನ್ಫೀಲ್ಡ್ ಬುಲ್ಲೆಟ್ ಏರಿ ಮಂಟಪಕ್ಕೆ ಬಂದ ದೆಹಲಿಯ ವಧು
ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ವಧುವಿನ ಕನಸುಗಳು ರಂಗೇರತೊಡಗುತ್ತವೆ. ಒಂದೊಂದು ಹೆಜ್ಜೆಯೂ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿರಬೇಕೆನ್ನುವ ತುಡಿತ ಹೆಚ್ಚತೊಡಗುತ್ತದೆ. ಮದುವೆ ಕಾರ್ಯಗಳ ಮೊದಲೇ ಇವೆಲ್ಲ ಗರಿಗೆದರಲಾರಂಭಿಸುತ್ತವೆ. . ದೆಹಲಿಯ ರಸ್ತೆಯಲ್ಲಿ ರಾತ್ರಿಹೊತ್ತು ಹೀಗೆ ರಾಯಲ್ ಎನ್ಫೀಲ್ಡ್ ಮೇಲೆ ಮದುವೆ ಮಂಟಪಕ್ಕೆ ಹೋಗುತ್ತಿರುವ ವಧು . ವೈಶಾಲಿ ಚೌಧರಿ ಎನ್ನುವ ಈ ವಧುವಿಗೆ ತಾನು ಮದುವೆ ಮಂಟಪಕ್ಕೆ ಹೀಗೆಯೇ ಪ್ರವೇಶಿಸಬೇಕು ಎನ್ನುವ ಕನಸಿತ್ತು. ಈ ಭಾರೀ ಉಡುಗೆ ತೊಡುಗೆ, ಅಲಂಕಾರ…
ವಧುವೆಂದರೆ ನೆಲ ನೋಡಿಕೊಂಡು ನಾಚಿಕೊಂಡು ಮದುವೆ ಮಂಟಪ ಪ್ರವೇಶಿಸಬೇಕು ಎನ್ನುವ ಕಾಲದಲ್ಲಿ ಈಗಿನ ಹುಡುಗಿಯರಿಲ್ಲವೇ ಇಲ್ಲ. ಪ್ರತೀ ಹಂತದಲ್ಲಿಯೂ ದಿಟ್ಟತೆಯಿಂದ, ಆತ್ಮವಿಶ್ವಾಸದಿಂದ ಬದುಕನ್ನು ಪ್ರವೇಶಿಸಲು ಇಚ್ಛಿಸುತ್ತಾರೆ. ಏಕೆಂದರೆ ಕುಟುಂಬದ ಹೊರತಾಗಿಯೂ ಅವರಿಗೆ ಅವರದೇ ಆದ ಕನಸುಗಳಿವೆ. ಅದಕ್ಕಾಗಿ ವ್ಯಕ್ತಿತ್ವವನ್ನು ಜಾಗ್ರತೆಯಿಂದ ಪೋಷಿಸಿಕೊಳ್ಳುತ್ತಾರೆ. ಜಾಣ್ಮೆಯಿಂದ ತಮ್ಮತನವನ್ನು ಪ್ರದರ್ಶಿಸುತ್ತಾರೆ. ಸಂಪ್ರದಾಯ ಮುರಿಯುವುದೆಂದರೆ ಧಿಕ್ಕರಿಸುವುದು ಅಂತಲ್ಲ. ದಿಟ್ಟತನದಿಂದ ಎಲ್ಲರೊಳಗೆ ಒಂದಾಗಲು ಪ್ರಯತ್ನಿಸುವುದು ಎನ್ನುತ್ತಾರೆ.