ಪಿಎಸ್ ಐ ಆಗೋ ಕನಸು ನನಸಾಗಿಲ್ಲವೆಂದು ಪೊಲೀಸರಿಗೆ ಕೆಲಸ ಕೊಟ್ಟ ಟಾಪರ್

ಬೆಂಗಳೂರು: ಅದೆಷ್ಟು ವಿದ್ಯೆ ಕಲಿತರು ಕೆಲವೊಂದು ಬಾರಿ ಅದೃಷ್ಟ ಕೈ ಕೊಟ್ಟಾಗ ಭಿಕ್ಷುಕನಾಗುವುದರಲ್ಲಿ ಸಂಶಯ ಪಡಬೇಕಾಗಿಲ್ಲ. ಕೆಲವರು ಕನಸಿನ ಕೆಲಸ ಬಿಟ್ಟು ಹೊಟ್ಟೆ ಪಾಡಿಗೆ ಬೇರೆ ಕೆಲಸ ಹುಡುಕಿ ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಖತರ್ನಾಕ್ ಕೆಲಸಕ್ಕೆ ಕೈ ಹಾಕುತ್ತಾರೆ.

 

ಅದೇ ರೀತಿ ಇಲ್ಲೊಬ್ಬ ಟಾಪರ್ ಪಿಎಸ್ ಐ ಆಗುವ ಕನಸು ಕಂಡಿದ್ದ. ಆದ್ರೆ, ಕನಸೇನೋ ನನಸಾಗಲಿಲ್ಲ. ಹೀಗಾಗಿ, ಪೊಲೀಸರಿಗೆ ಕೆಲಸ ಕೊಡುವಂತಹ ಕಾರ್ಯಕ್ಕೆ ಕೈ ಹಾಕಿದ್ದಾನೆ. ಹೌದು. ಪೊಲೀಸ್ ಆಗಲು ಆಗಲಿಲ್ಲ ಅಂತ ನಕಲಿ ಪೊಲೀಸ್ ಆಗಿ ಕಳ್ಳತನಕ್ಕೆ ಇಳಿದಿದ್ದಾನೆ. ಆದ್ರೆ, ಇವನು ಕೊಟ್ಟ ಕೆಲಸ ಚಾಚು ತಪ್ಪದೆ ಪಾಲಿಸಿದ ಪೊಲೀಸರು ಸುಲಿಗೆಗೆ ಇಳಿದಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಿಜಯನಗರದ ಬಿಸ್ಲಿ ಇರುವ ಮೂಡಲಪಾಳ್ಯ ನಿವಾಸಿ 23 ವರ್ಷದ ವಿನಯ್ ಕುಮಾರ್. ಈತ ಪಿಎಸ್ ಐ ಆಗಲು ತಯಾರಿ ನಡೆಸಿದ್ದು, ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಟಾಫರ್ ಆಗಿದ್ದನು. ಆದರೆ ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಅಂತ ಕಳವು ಮಾಡಲಾರಂಭಿಸಿದ್ದಾನೆ.

ಮೊದಲಿಗೆ ಚಂದ್ರ ಲೇಔಟ್ ನಲ್ಲಿ ಬೈಕ್ ಕಳವು ಮಾಡಿದ್ದನು. ನಂತರ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡ್ತಿದ್ದ. ಈ ವಿಷಯ ತಿಳಿದು ಪೊಲೀಸರು ಆತನನ್ನು ಬಂಧಿಸಿದ್ದಾರೆ.ಒಟ್ಟಾರೆ, ಕನಸೇನೋ ಕಳ್ಳತನದ ಮೂಲಕ ನನಸಾಯಿತು. ಆದ್ರೆ, ಅವ ಮಾತ್ರ ಪೋಲಿಸರ ವಶವಾದ..

Leave A Reply

Your email address will not be published.