WhatsApp ನಿಂದ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ವಾಪಸ್ ಪಡೆಯಬಹುದು | ಹೊಸ ಅಪ್ಡೇಟ್ ಬಿಡುಗಡೆ

ಏನಾದರೂ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುವಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಇದೀಗ ಮತ್ತೊಂದು ಭರ್ಜರಿ ಅಪ್‌ಡೇಟ್ ಒಂದನ್ನು ನೀಡಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

 

ವಾಟ್ಸಪ್ ಬೀಟಾ ಟ್ರ್ಯಾಕರ್ WABetalnfo ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ವಾಟ್ಸಪ್ ಬಳಕೆದಾರರು ಡಿಲೀಟ್ ಮಾಡಿರುವ ಸಂದೇಶಗಳನ್ನು ಮತ್ತೆ ವಾಪಸ್ ಪಡೆಯಬಹುದಾದ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದೆಯಂತೆ. ಹಾಗೂ ಪ್ರಸ್ತುತ ಈ ಹೊಸ ವೈಶಿಷ್ಟ್ಯವನ್ನು Android 2.22.18.13 ನಲ್ಲಿ ಕೆಲವು ಬೀಟಾ ಪರೀಕ್ಷಕರರೊಂದಿಗೆ ಪರೀಕ್ಷಿಸಲಾಗುತ್ತಿದೆ ಎಂದು WABetalnfo ವರದಿಯಲ್ಲಿ ಹೇಳಲಾಗಿದೆ.

WABetalnfo ವರದಿಯಲ್ಲಿ ಈ ಬಗ್ಗೆ ಸ್ಟೀನ್ ಶಾಟ್ ಒಂದನ್ನು ಸಹ ಹಂಚಿದ್ದಾರೆ. ಇದರ ಪ್ರಕಾರ ವಾಟ್ಸಪ್ ನಲ್ಲಿ ಹೊಸ “undo” ಬಟನ್ ತೋರಿಸುವ ಬಟನ್ ಪ್ರಕಟಿಸಲಾಗಿದೆ. ಇದು ವಾಟ್ಸಪ್ ನಲ್ಲಿ ಡಿಲೀಟ್ ಮಾಡಿರುವ ಸಂದೇಶಗಳನ್ನು ಮತ್ತೆ ವಾಪಸ್ ಪಡೆಯಬಹುದಾದ ವೈಶಿಷ್ಟ್ಯವಾಗಿದ್ದು, ಮೆಸೇಜ್‌ಗಳನ್ನು ಡಿಲೀಟ್ ಮಾಡಿದ ಕೆಲವೇ ಕೆಲವು ಸೆಕೆಂಡ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇನ್ನು ಈ ವೈಶಿಷ್ಟ್ಯವು “Delete for me” ಕ್ಲಿಕ್ ಮಾಡುವ ಮೂಲಕ ಸಂದೇಶವನ್ನು ಅಳಿಸಿದ ಬಳಕೆದಾರರಿಗಾಗಿ ಸಹಾಯವಾಗುವಂತೆ ಇರಲಿದೆ ಎಂದು ಹೇಳಲಾಗಿದೆಯಾದರೂ, ಈ ಕುರಿತಂತೆ ವಾಟ್ಸಪ್ ನಿಂದ ಹೆಚ್ಚಿನ ಅಪ್‌ಡೇಟ್‌ಗೆ ಕಾಯಲಾಗುತ್ತಿದೆ.

Leave A Reply

Your email address will not be published.