ಬ್ಯಾಂಕ್ ಗ್ರಾಹಕರಿಗೆ ಶಾಕ್: ಎಟಿಎಂ ವಿತ್ ಡ್ರಾ ನಿಯಮದಲ್ಲಿ ಮಹತ್ವದ ಬದಲಾವಣೆ!

Share the Article

ದೇಶದ ಪ್ರಮುಖ ಬ್ಯಾಂಕ್ ಗಳು ತಮ್ಮ ಎಟಿಎಂಗಳ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ಮಾಡಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮದ ಪ್ರಕಾರ ಉಚಿತ ಡ್ರಾ ನಂತರ ಹೆಚ್ಚುವರಿ ಶುಲ್ಕ ವಿಧಿಸಲಿದೆ.

ಆಗಸ್ಟ್ 1, 2022 ರಿಂದ ಎಲ್ಲಾ ಕೇಂದ್ರಗಳಲ್ಲಿ ಪ್ರತಿ ಹಣಕಾಸು ವಹಿವಾಟಿಗೆ ರೂ. 17 ಮತ್ತು ಪ್ರತಿ ಹಣಕಾಸುಯೇತರ ವಹಿವಾಟಿಗೆ ರೂ. 6 ಇಂಟರ್‌ಚೇಂಜ್ ಶುಲ್ಕ ವಿಧಿಸಲು ಆರ್‌ಬಿಐ ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

ಹೆಚ್ಚುತ್ತಿರುವ ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆ ವೆಚ್ಚಗಳನ್ನು ಪೂರೈಸಲು ಬ್ಯಾಂಕುಗಳು ಎಟಿಎಂ ಸೇವಾ ಶುಲ್ಕಗಳ ಹೊರೆಯನ್ನು ಗ್ರಾಹಕರಿಂದ ಕಡಿಮೆ ಮಾಡಿಕೊಳ್ಳುತ್ತಿವೆ ಎಂದು ಹೇಳಬಹುದು. ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ಗಳು ಅಥವಾ ಎಟಿಎಂ ಕಾರ್ಡ್‌ಗಳ ಮೇಲೆ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ,.ಇದು ಗ್ರಾಹಕರು ಹೊಂದಿರುವ ಕಾರ್ಡ್‌ನ ಪ್ರಕಾರವನ್ನು ಅವಲಂಬಿಸಿರುತ್ತದೆ.

ಆರ್ ಬಿಐ ನಿಯಮದ ಪ್ರಕಾರ ಆಗಸ್ಟ್ 1 ರಿಂದ ಅಂತರ ಬ್ಯಾಂಕ್ ವರ್ಗಾವಣೆಗಾಗಿ 17 ರೂ. ಶುಲ್ಕ ವಿಧಿಸಲಾಗುತ್ತಿದೆ. ಹಣಕಾಸು ರಹಿತ ವ್ಯವಹಾರಗಳಿಗೆ 6 ರೂ. ಶುಲ್ಕ ವಿಧಿಸಲಾಗುತ್ತಿದೆ.

ಆರ್ ಬಿಐ ನಿಯಮದ ಪ್ರಕಾರ ಗ್ರಾಹಕರು ಡೆಬಿಟ್ ಕಾರ್ಡ್ ಮೂಲಕ ಪ್ರತಿ ತಿಂಗಳು ತಮ್ಮದೇ ಬ್ಯಾಂಕ್ ಎಟಿಎಂಗಳಲ್ಲಿ ಗರಿಷ್ಠ 5 ಬಾರಿ ಉಚಿತವಾಗಿ ಡ್ರಾ ಮಾಡಬಹುದು. ತಮ್ಮ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕ್ ಎಟಿಎಂಗಳಲ್ಲಿ ಗರಿಷ್ಠ 3 ಬಾರಿ ವಿತ್ ಡ್ರಾ ಮಾಡಬಹುದಾಗಿದೆ. ಜನವರಿ 1ರಿಂದ ಎಟಿಎಂ ವಿತ್ ಡ್ರಾ ನಿಯಮ ಜಾರಿಗೆ ಬಂದಿದ್ದು, ದೇಶದ ಪ್ರಮುಖ ಬ್ಯಾಂಕ್ ಗಳು ಉಚಿತ ವಿತ್ ಡ್ರಾ ಮಿತಿ ದಾಟಿದ ನಂತರ 21 ರೂ. ಶುಲ್ಕ ವಿಧಿಸಲಿದೆ.

ಪ್ರತಿ ತಿಂಗಳು ಎಟಿಎಂ ವಿತ್ ಡ್ರಾ ಮಿತಿ ಮೀರಿದ ನಂತರ ಪ್ರತಿ ಬಾರಿ ಡ್ರಾ ಮಾಡಿದಾಗಲೂ ಗ್ರಾಹಕರು 21 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೂ ಮುನ್ನ ಬ್ಯಾಂಕ್ ಗಳು 20 ರೂ. ವಿಧಿಸುವ ಪ್ರಸ್ತಾಪ ಇತ್ತು.

ಪ್ರತಿಯೊಂದು ವಹಿವಾಟಿಗೆ ಬ್ಯಾಂಕುಗಳು ಎಷ್ಟು ಶುಲ್ಕ ವಿಧಿಸುತ್ತದೆ

ಈ ಮೊದಲು, ಅಂತಹ ಪ್ರತಿಯೊಂದು ವಹಿವಾಟಿಗೆ ರೂ. 20 ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶವಿತ್ತು. ಆದರೆ ಈ ಶುಲ್ಕವನ್ನು ಈಗ ಪರಿಷ್ಕೃತಗೊಳಿಸಲಾಗಿದೆ. ಗ್ರಾಹಕರಿಗೆ ತಮ್ಮ ಬ್ಯಾಂಕ್ ಎಟಿಎಂಗಳಲ್ಲಿ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಅನುಮತಿಸಲಾಗಿದೆ ಮತ್ತು ಇತರ ಬ್ಯಾಂಕ್ ಎಟಿಎಂಗಳಿಗೆ ಮೂರು ಉಚಿತ ವಹಿವಾಟುಗಳನ್ನು ಮಿತಿಗೊಳಿಸಲಾಗಿದೆ. ಮೆಟ್ರೋ ಅಲ್ಲದ ಕೇಂದ್ರಗಳಲ್ಲಿನ ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಪಡೆಯಬಹುದು.

ಎಟಿಎಂಗಳಲ್ಲಿ ಉಚಿತ ವಹಿವಾಟುಗಳ ಸಂಖ್ಯೆಯು ಖಾತೆಯ ಪ್ರಕಾರ ಮತ್ತು ನೀವು ಹೊಂದಿರುವ ಡೆಬಿಟ್ ಕಾರ್ಡ್‌ನ ಪ್ರಕಾರ ಒಂದಕ್ಕೊಂದು ಭಿನ್ನವಾಗಿರಬಹುದು. ಉಚಿತ ಮಾಸಿಕ ವಹಿವಾಟಿನ ಅನುಮತಿಸುವ ಮಿತಿಯನ್ನು ಮೀರಿ ಎಟಿಎಂಗಳನ್ನು ಬಳಸಿದರೆ ಶುಲ್ಕ ವಿಧಿಸಲಾಗುತ್ತದೆ.

ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಾಸಿಕ ಉಚಿತ ವಹಿವಾಟು ಮಿತಿಗಿಂತ ಹೆಚ್ಚಿನ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ ರೂ. 21 ಶುಲ್ಕ ವಿಧಿಸಲು ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಅನುಮತಿಯನ್ನು ನೀಡಲಾಗಿದೆ. ಇದು ಜನವರಿ 1, 2022 ರಿಂದ ಜಾರಿಗೆ ಬಂದಿದೆ.

Leave A Reply

Your email address will not be published.