BIG BREAKING NEWS : ಪ್ರವೀಣ್ ನೆಟ್ಟಾರು ಹತ್ಯೆಯ ಅಸಲಿ ಕಾರಣ ಬಯಲು ! ಇದೇ ಕಾರಣಕ್ಕಾಗಿ ಕೊಲೆ
ಮಂಗಳೂರು: ನಗರದ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ನೆಟ್ಟಾರು ಕೊಲೆಗೆ ಅಸಲಿ ಕಾರಣ ಏನು ಎಂಬುದು ಹೊರಗೆ ಬಿದ್ದಿದೆ. ಎನ್ಐಎ ಅಧಿಕಾರಿಗಳ ತನಿಖೆ ವೇಳೆ ಈ ಸ್ಪೋಟಕ ಅಂಶ ಬೆಳಕಿಗೆ ಬಂದಿವೆ.
ಎನ್ಐಎ ಎಫ್ಐಆರ್ ನಲ್ಲಿದೆ ಆ ಒಂದು ಸಿಕ್ರೇಟ್ ಬಹಿರಂಗವಾಗಿದೆ. ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಸಂಚು ಹಾಕಲಾಗಿತ್ತು. ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಲು ಪ್ರವೀಣ್ ನೆಟ್ಟಾರು ಹತ್ಯೆ.!ಆ ಉದ್ದೇಶದಿಂದ ಪ್ರವೀಣ್ ನೆಟ್ಟಾರು ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು.
ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಎನ್ಐಎ ಎಫ್ಐಆರ್ ದಾಖಲಿಸಿದೆ. ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಝಾಕೀರ್, ಮಹಮ್ಮದ್ ಶಫೀಕ್, ಶೇಕ್ ಸದ್ದಾಂ ಮತ್ತು ಅಬ್ದುಲ್ ಹ್ಯಾರಿಸ್ ಮೇಲೆ ಎಫ್ಐಆರ್ ದಾಖಲಾಗಿದೆ. ಐಪಿಸಿ 120ಬಿ, 302, 34 ಹಾಗೂ ಯುಎಪಿಎ ಕಲಂ 16 ಮತ್ತು18 ರಡಿ ಎಫ್ಐಆರ್ ದಾಖಲಾಗಿದೆ. ಪ್ರವೀಣ್ ನೆಟ್ಟಾರು ಆರೋಪಿಗಳ ವಿರುದ್ಧ ಯುಎಪಿಎ ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆ ಕೇಸ್ ಫೈಲ್ ಪಡೆದು ಎನ್ಐಎ ತನಿಖೆ ಕೈಗೊಂಡಿದೆ. ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಕೇಸ್ ವಿವರಗಳು ಎನ್ಐಎ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅದರ ಜೊತೆಗೆ ಹತ್ಯೆ ಹಿಂದಿನ ಉದ್ದೇಶ ಏನು ಎಂಬುದು ಉಲ್ಲೇಖಿಸಿದೆ. ತನಿಖಾ ಸಮಯದಲ್ಲಿ ಬೆಳಕಿಗೆ ಬಂದ ಸಿಕ್ರೇಟ್ ಎನ್ಐಎ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಎನ್ಐಎ ತಂಡ ತನಿಖೆ ಕೈಗೊಂಡಿದೆ.
ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಿದ್ದು ಕೇವಲ ವೈಯಕ್ತಿ ಮತ್ತು ವ್ಯಾವಹಾರಿಕ ದ್ವೇಷ ಆಗಿರದೆ, ಅದು ಸಮಾಜದಲ್ಲಿ ಭಯ ಅಶಾಂತಿಯನ್ನು ಸೃಷ್ಟಿಸುವುದು ಅದರ ಉದ್ದೇಶ ಎನ್ನುವ ಅಂಶವನ್ನು ಏನ್ಐಎ ಗುರುತಿಸಿ, ಅದರಂತೆ ಕೇಸನ್ನು ಪುಟ್ ಫಾರ್ವರ್ಡ್ ಮಾಡುತ್ತಿದೆ. ಆ ಮೂಲಕ ಆರೋಪಿಗಳ ಮೇಲಿನ ಕಾನೂನಿನ ಕುಣಿಕೆ ಸುಲಭಕ್ಕೆ ಬಿಡಿಸಿಕೊಳ್ಳಲಾಗದಷ್ಟು ಬಲವಾಗುತ್ತಿದೆ. ಈಗ ತನಿಖಾ ತಂಡಗಳು ಆ ನಿಟ್ಟಿನಲ್ಲಿ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ.