ಕಾರು ಹಾಗೂ ಬೈಕ್ ಪ್ರಿಯರಿಗೆ ನೆಮ್ಮದಿಯ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ
ಕಾರು ಹಾಗೂ ಬೈಕ್ ಪ್ರಿಯರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು, ಮುಂದಿನ ಒಂದು ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ.
ತಂತ್ರಜ್ಞಾನ ಮತ್ತು ಹಸಿರು ಇಂಧನದ ಅಭಿವೃದ್ಧಿಯೊಂದಿಗೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಆಟೋಮೊಬೈಲ್ಗಳ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಂದರೆ, ಸಾಮಾನ್ಯ ಜನರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಚಾಲಿತ ವಾಹನಗಳಿಗೆ ಸರಿಸಮವಾಗಲಿದೆ. ಮುಂದಿನ ದಿನಗಳಲ್ಲಿ ಇದು ಈ ಕ್ಷೇತ್ರದಲ್ಲಿ ಕ್ರಾಂತಿ ತರಬಹುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
‘ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆ ವೇಗವಾಗಿ ಇಳಿಯುತ್ತಿದೆ ಎಂದು ಗಡ್ಕರಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರಸ್ತುತ ನಾವು ಜಿಂಕ್-ಐಯಾನ್, ಅಲ್ಯೂಮಿನಿಯಂ-ಐಯಾನ್, ಸೋಡಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಯಲ್ಲಿ ತೊಡಗಿದ್ದು, ಗರಿಷ್ಠ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ಗಳು, ಕಾರುಗಳು, ಆಟೋ ರಿಕ್ಷಾಗಳ ಬೆಲೆಯು ಪೆಟ್ರೋಲ್ ಚಾಲಿತ ಸ್ಕೂಟರ್ಗಳು, ಕಾರುಗಳು ಮತ್ತು ಆಟೋ ರಿಕ್ಷಾಗಳಿಗೆ ಸಮನಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರ ಪ್ರಕಾರ, ‘ನೀವು ಇಂದು ಪೆಟ್ರೋಲ್ಗೆ 100 ರೂಪಾಯಿ ಖರ್ಚು ಮಾಡುತ್ತಿದ್ದರೆ, ಎಲೆಕ್ಟ್ರಿಕ್ ವಾಹನ ಚಲಾಯಿಸಲು ಈ ವೆಚ್ಚವು 10 ರೂಪಾಯಿಗೆ ಇಳಿಕೆಯಾಗಲಿದೆ. ಹಸಿರು ಹೈಡ್ರೋಜನ್ ಚಾಲಿತ ಕಾರಿನ ವೆಚ್ಚ ಪ್ರತಿ ಕಿ.ಮೀಗೆ 1 ರೂಪಾಯಿಗಿಂತ ಕಡಿಮೆಯಿದ್ದರೆ, ಪೆಟ್ರೋಲ್ ಕಾರಿನ ಪ್ರತಿ ಕಿ.ಮೀ ವೆಚ್ಚ 5-7 ರೂ.ಇದೆ.
ಇದೀಗ ಇಲ್ಲಿನ ಬಹುತೇಕ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ವಾಸ್ತವದಲ್ಲಿ ನಿತೀನ್ ಗಡ್ಕರಿ ಅವರು ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದು, ಇತ್ತೀಚೆಗಷ್ಟೇ ಅವರು ಗ್ರೀನ್ ಹೈಡ್ರೋಜನ್ ಇಂಧನ ಕಾರನ್ನು ಬಿಡುಗಡೆ ಮಾಡಿದ್ದರು.