Shocking News: ಸಣ್ಣ ವಯಸ್ಸಿಗೇ ಇಹಲೋಕ ತ್ಯಜಿಸಿದ ಖ್ಯಾತ ಚಲನಚಿತ್ರ ವಿಮರ್ಶಕ ʻಕೌಶಿಕ್ʼ

ಜನಪ್ರಿಯ ಚಲನಚಿತ್ರ ವಿಮರ್ಶಕ LM ಕೌಶಿಕ್ ಅವರು ತಮ್ಮ ಸಣ್ಣ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ ಕೌಶಿಕ್ ನಿದ್ರೆ ಮಾಡುವುದಾಗಿ ಹೇಳಿ ತಮ್ಮ ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

“ಖ್ಯಾತ ಚಲನಚಿತ್ರ ವಿಮರ್ಶಕ, ಚಲನಚಿತ್ರ ಟ್ರ್ಯಾಕರ್, ಮತ್ತು ಗಲಟ್ಟಾ ವಿಜೆ @LMKMovieManiac ಇಂದು ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ತುಂಬಲಾರದ ನಷ್ಟವಾಗಿದೆ. ನಾವು ಇಲ್ಲಿ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದೇವೆ ಎಂದು ದಕ್ಷಿಣದ ಪ್ರಮುಖ ಖಾಸಗಿ ಮನರಂಜನಾ ಸುದ್ದಿ ಪೋರ್ಟಲ್‌ಗಳಲ್ಲಿ ಒಂದಾದ ಸಂಸ್ಥೆಯು ಮಾಹಿತಿ ನೀಡಿದೆ.

i

ಕೌಶಿಕ್ ಅವರ ಅಂತಿಮ ಸಂಸ್ಕಾರ ಇಂದು ಚೆನ್ನೈನಲ್ಲಿ ನಡೆಯಲಿದೆ. ತಮಿಳು ನಟ ಧನುಷ್, ದುಲ್ಕರ್ ಸಲ್ಮಾನ್, ರಾಕುಲ್ ಪ್ರೀತ್ ಮತ್ತು ವೆಂಕಟ್ ಪ್ರಭು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಕೌಶಿಕ್ ಅವರ ಅಕಾಲಿಕ ಮರಣದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.