ಅಂತ್ಯಕ್ರಿಯೆಗೆ ಹೊರಟಿದ್ದವರ ಮೇಲೆ ಜವರಾಯನ ಅಟ್ಟಹಾಸ ; ಮೂವರು ಸ್ಥಳದಲ್ಲೇ ಸಾವು

Share the Article

ಅಂತ್ಯಕ್ರಿಯೆಗೆ ಹೊರಟವರು ದಾರಿ ಮಧ್ಯೆಯೇ ಭೀಕರ ಅಪಘಾತಕ್ಕೆ ತುತ್ತಾಗಿ, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತಪಟ್ಟವರನ್ನು ಕಲ್ಲೂರಿನ ಭೀಮವ್ವ ಮಾಸಳಿ (50), ಬಸವರಾಜ ಮಾಸಳಿ (40) ಹಾಗೂ ನರೇಶ್ (8) ಎಂದು ಗುರುತಿಸಲಾಗಿದೆ.

ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಈ ಅಪಘಾತ ನಡೆದಿದ್ದು, ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ನಡೆದಿದೆ. ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಈ ವೇಳೆ ಬೈಕ್ ನಲ್ಲಿದ್ದ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಂತ್ಯಕ್ರಿಯೆಗಾಗಿ ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಹೊರಟಿದ್ದಾಗ ಅಪಘಾತ ಸಂಭವಿಸಿ, ಇವರದ್ದೇ ಅಂತ್ಯಕ್ರಿಯೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Leave A Reply