ಬೀದಿ ನಾಯಿ ಮೇಲೆ ಹಲ್ಲೆ ಆರೋಪ | ಮಾಜಿ ಸೈನಿಕನಿಗೆ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿದ ಮಹಿಳೆ

ಸೆಕ್ಯುರಿಟಿ ಗಾರ್ಡ್ ಓರ್ವ ಬೀದಿ ನಾಯಿಯ ಮೇಲೆ ಹಲ್ಲೆ ಮಾಡಿದನೆಂದು ಯುವತಿಯೋರ್ವಳು ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ನಡೆದಿದೆ. ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿರುವ ಮಹಿಳೆಯೊಬ್ಬಳು ಸೆಕ್ಯುರಿಟಿ ಗಾರ್ಡ್ ಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ‌. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

 

2.10 ನಿಮಿಷದ ಈ ವಿಡಿಯೋ ಒಂದರಲ್ಲಿ, ಮಹಿಳೆಯೋರ್ವಳು ಸೆಕ್ಯುರಿಟಿ ಗಾರ್ಡ್‌ಗೆ ಬೆದರಿಕೆ ಹಾಕುವುದು ಇದೆ. ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರಿಗೆ ದೂರು ನೀಡುವುದಾಗಿ ಮಹಿಳೆ ಬೆದರಿಸಿದ್ದಾಳೆ.
ಸಂತ್ರಸ್ತ ಅಖಿಲೇಶ್ ತಾನು ಮಾಜಿ ಸೈನಿಕ ಹಾಗೂ ನಾಯಿಯ ಮೇಲೆ ಹಲ್ಲೆ ಮಾಡಲಿಲ್ಲ. ನಾಯಿಯನ್ನು ಕಾಲನಿಯಿಂದ ದೂರ ಓಡಿಸುತ್ತಿದ್ದೆ ಎಂದಿದ್ದಾರೆ.

ಅಂದ ಹಾಗೆ ಈ ಘಟನೆ ಭಾನುವಾರ ನಡೆದಿದೆ. ಈ ಬಗ್ಗೆ ಆಗ್ರಾ ಪೊಲೀಸರು ಮಾತನಾಡಿದ್ದು, ವೀಡಿಯೋದ ಗಂಭೀರತೆಯನ್ನು ಅರಿತುಕೊಂಡಿದ್ದೇವೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ, ವಿಡಿಯೋ ಬಿಡುಗಡೆ ಮಾಡಿರುವ ಆರೋಪಿ ಮಹಿಳೆ, ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ನನ್ನ ಹೆಸರು ಡಿಂಪಿ ಮಹೇಂದ್ರು ಎಂದು ಹೇಳಿಕೊಂಡಿದ್ದು, ಕಳೆದ 15-18 ವರ್ಷಗಳಿಂದ ಪ್ರಾಣಿ ಹಿಂಸೆಯ ವಿರುದ್ಧ ಕೆಲಸ ಮಾಡುತ್ತಿದ್ದೇವೆ. ನಾಯಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕಾಲನಿಯಿಂದ ಎರಡ್ಮೂರು ದಿನಗಳ ಹಿಂದೆ ಕರೆ ಬಂದಿದೆಮ ಆದರೆ, ನಾನು ಊರಲ್ಲಿ ಇಲ್ಲದ ಕಾರಣ,ಇದು ಸಾಧ್ಯವಾಗಿರಲಿಲ್ಲ. ಕಟ್ಟಡದ ಮುಂದೆ ಗಲೀಜು ಮಾಡಿದೆ ಅಂತ ಒಂದು ನಾಯಿಯನ್ನು ಈ ಸೆಕ್ಯುರಿಟಿ ಈಗಾಗಲೇ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಇತ್ತ ಕಡೆ ಎಲ್‌ಐಸಿ ಆಫೀಸರ್ ಕಾಲನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸಂತ್ರಸ್ತ ಅಖಿಲೇಶ್ ಸಿಂಗ್ ಎಂಬುವರು ಮಹಿಳೆಯ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ನ್ಯೂ ಆಗ್ರಾ ಪೊಲೀಸ್ ಠಾಣೆಯ ಎಸ್ಎಚ್‌ಒ ವಿಜಯ್ ವಿಕ್ರಮ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave A Reply

Your email address will not be published.