ಬಟ್ಟೆ ಒಣಗಲು ಹಾಕಿದ್ದ ವೈಯರ್ ಗೆ ವಿದ್ಯುತ್ ಸ್ಪರ್ಶಿಸಿ ದಂಪತಿ ದಾರುಣ ಸಾವು!!!

Share the Article

ಬಟ್ಟೆ ಒಣಹಾಕಲು ಹಾಕಿದ್ದ ವೈಯರ್ ಮುಟ್ಟಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ಕರೆಂಟ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.

ವೀಣಾ(28), ರವಿಶಂಕರ್ (40) ಮೃತಪಟ್ಟ ಗಂಡ, ಹೆಂಡತಿ.

ಬಟ್ಟೆ ಒಣಗಲು ಹಾಕಿ ವೈಯರ್ ಟಚ್ ಮಾಡಿದ ಪತಿ ರವಿಶಂಕರ್‌ಗೆ ಕರೆಂಟ್ ಶಾಕ್ ಹೊಡೆದಿದೆ. ಇದನ್ನು ಕಂಡು ಪತ್ನಿ ವೀಣಾ ಕಾಪಾಡಲು ಮುಂದಾದಾಗಿದ್ದಾರೆ. ಕೂಡಲೇ ಆಕೆಗೂ ವಿದ್ಯುತ್ ಸ್ಪರ್ಶಿಸಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply