ಈ ನಂಬರ್ ನಿಂದ ಕರೆ ಬಂದ್ರೆ ಯಾವುದೇ ಕಾರಣಕ್ಕೂ ರಿಸೀವ್ ಮಾಡಬೇಡಿ – ಟೆಲಿಕಾಂ ಕಂಪನಿಯಿಂದ ಎಚ್ಚರಿಕೆ
ದಿನದಿಂದ ದಿನಕ್ಕೆ ವಂಚಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೆಷ್ಟೇ ಜಾಗ್ರತೆ ವಹಿಸಿದರೂ ಜನ ಮೋಸಕ್ಕೆ ಒಳಗಾಗುತ್ತಲೇ ಇದ್ದಾರೆ. ಆನ್ಲೈನ್ ವಹಿವಾಟು ಪ್ರಾರಂಭವಾದ್ದರಿಂದ ಇದನ್ನೇ ಬಂಡವಾಳವಾಗಿಸಿಕೊಂಡು ಕಿರಾತಕರು ಹಣ ದೋಚುತ್ತಿದ್ದಾರೆ.
ಅಪರಿಚಿತ ನಂಬರ್‌ಗಳಿಂದ ಫೋನ್ ಕರೆಗಳು ಮಾಡಿ ಕಂಪನಿ ಹೆಸರಿನಿಂದ ಹಣ ದೋಚುತ್ತಾರೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಇಲಾಖೆ ಅಲರ್ಟ್ ಘೋಷಣೆ ಮಾಡಿದ್ದು, ಬಳಕೆದಾರರು ಅಲರ್ಟ್ ಆಗಿರಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ನಂಬರ್ ಅನ್ನು ತಿಳಿಸಿ, ಯಾವುದೇ ಕಾರಣಕ್ಕೂ ಕಾಲ್ ತೆಗಿಯದಂತೆ ತಿಳಿಸಿದ್ದಾರೆ.
ಹೌದು, +1, +92, +968, +44, +473, +809 ಮತ್ತು +900 ನಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಪ್ರಾರಂಭವಾಗುವ ದೂರವಾಣಿ ಕರೆಗಳು ಅಥವಾ ವಾಟ್ಸಾಪ್ ಕರೆಗಳನ್ನ ಸ್ವೀಕರಿಸಬಾರದು ಎಂದು ಬಳಕೆದಾರರನ್ನ ಎಚ್ಚರಿದೆ.
ಈ ನಂಬರ್ʼಗಳಿಂದ ಕರೆಗಳು ಬಂದ್ರೆ ಯಾವುದೇ ಸಂದರ್ಭದಲ್ಲೂ ಫೋನ್ ತೆಗೆಯಬೇಡಿ ಎಂದು ಟೆಲಿಕಾಂ ಇಲಾಖೆ ಎಚ್ಚರಿಕೆ ನೀಡುತ್ತಿದ್ದು ಈ ಸಂಖ್ಯೆಗಳ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿದೆ.
ಒಂದು ಕರೆ ಸ್ವೀಕರಿಸಿದ್ದೇ ಆದಲ್ಲಿ ಅವರು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಾರೆ. ಇನ್ನು ಮಹಿಳೆಯಾಗಿದ್ರೆ, ಬ್ಲಾಕ್ ಮೇಲ್ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೇ ಅವರ ಖಾತೆಯಿಂದ ನೇರವಾಗಿ ಹಣ ಕಟ್ ಆಗುತ್ತಿದೆ. ಇತ್ತೀಚಿನ ಸಮೀಕ್ಷೆಯಲ್ಲಿ ಇಂತಹ ಹಲವು ಘಟನೆಗಳು ನಡೆದಿರುವುದು ಕಂಡು ಬಂದಿದೆ.