ರೈಲು ಬಂತೆಂದು ಇನ್ನೊಂದು ಹಳಿಯತ್ತ ಓಡಿದ ವಿದ್ಯಾರ್ಥಿನಿಗೆ ಹೊಂಚು ಹಾಕಿದ್ದ ಜವರಾಯ-ನಡೆಯಿತು ದುರಂತ!!

ಕೊಚ್ಚಿ: ರೈಲ್ವೆ ಹಳಿ ದಾಟುವಾಗ ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆಯೊಂದು ಕೇರಳದ ಅಂಗಮಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮೃತ ಯುವತಿಯನ್ನು ಅನು ಸಾಜನ್(21)ಎಂದು ಗುರುತಿಸಲಾಗಿದೆ. ಯುವತಿ ಮಾರ್ನಿಂಗ್ ಸ್ಟಾರ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಎಂದಿನಂತೆ ಪುರಸಭೆ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ರೈಲು ಹಳಿ ದಾಟಿ ಕಾಲೇಜಿನತ್ತ ಹೊರಟಿದ್ದಳು.
ಯುವತಿ ಹಳಿ ದಾಟಲು ಮುಂದಾದಾಗ ರೈಲು ಬಂದಿದ್ದು, ಅದನ್ನು ತಪ್ಪಿಸಲು ಇನ್ನೊಂದು ಹಳಿಯತ್ತ ಓಡಿದ್ದಾಳೆ ಎನ್ನಲಾಗಿದ್ದು, ಈ ವೇಳೆ ಇನ್ನೊಂದು ಹಳಿಯಲ್ಲಿ ರೈಲು ರಿಪೇರಿ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಕಳೆದ ಜುಲೈ ನಲ್ಲಿ ಇಂತಹುದ್ದೇ ಘಟನೆ ಕಣ್ಣೂರಿನಲ್ಲಿ ನಡೆದಿದ್ದು, ತಾಯಿ ಎದುರಲ್ಲಿಯೇ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ರೈಲಿನ ಅಡಿಗೆ ಬಿದ್ದು ಮೃತಪಟ್ಟಿದ್ದಳು.