ದೊಡ್ಮನೆ ಎಂಟ್ರಿಗೆ ಕಸರತ್ತು ಮಾಡುತ್ತಿರುವ ‘ಕಾಫಿ ನಾಡು ಚಂದು’ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಆಗ್ತಾರಾ?

ಈಗೀಗ ಎಲ್ಲಿ ನೋಡಿದರೂ ಕಾಫಿ ನಾಡು ಚಂದುನದ್ದೇ ಹವಾ. ಅದರಲ್ಲೂ ಬಿಗ್ ಬಾಸ್ ಶೋ ಆರಂಭವಾಗುವ ಮೊದಲು ಚಂದು ಆ ಮನೆಯೊಳಗೆ ಕಾಲಿಡೋದೇ ಅಂತ ಫಿಕ್ಸ್ ಆದಂತಿತ್ತು. ಆದರೆ ಅದು ಮಿಸ್ಸಾಯಿತು. ಈಗ ಕಾಫಿ ನಾಡು ಚಂದು ಮತ್ತೆ ಬಿಗ್ ಬಾಸ್ ತೆರೆಯ ಮೇಲೆ ಬರಲು ವಿನೂತನ ಪ್ರಯೋಗದಲ್ಲಿ ತೊಡಗಿದ್ದಾರೆ.

ಕನ್ನಡದ ಬಿಗ್ ಬಾಸ್ ಓಟಿಟಿ ಶೋ ಆರಂಭವಾಗಿ ವಾರ ಕಳೆದಿದೆ. ಈಗಾಗಲೇ ದೊಡ್ಮನೆಯೊಳಗೆ ಲವ್ವಿ ಡವ್ವಿ, ಗುಸು-ಗುಸು, ಮುನಿಸು-ಗುದ್ದಾಟ ಎಲ್ಲಾ ಶುರುವಾಗಿದೆ. 16 ಸ್ಪರ್ಧಿಗಳು ಈಗಾಗಲೇ ದೊಡ್ಮನೆ ಒಳಗೆ ಎಂಟ್ರಿಕೊಟ್ಟಿದ್ದಾರೆ.

ಬಿಗ್ ಬಾಸ್ ಆರಂಭವಾಗುವ ಮೊದಲು, ಕಾಫಿನಾಡು ಚಂದು ದೊಡ್ಮನೆಯಲ್ಲಿ ಇರಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಆದರೆ, ಚಂದು ಫ್ಯಾನ್ಸ್ ಗೆ ನಿರಾಸೆಯಾಗುವಂತೆ, ಬಿಗ್ ಬಾಸ್ ಗ್ರ್ಯಾಂಡ್ ಲಾಂಚ್ ಆಯಿತು. ಈಗ ಕಾಫಿನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಈ ಮೊದಲು ತನಗೆ ಬಿಗ್ ಬಾಸ್ ಮನೆಯೊಳಗೆ ಹೋಗಲು ಇಚ್ಚೆ ಇದ್ದುದಾಗಿ ಚಂದು ಹೇಳಿದ್ದರು. ಅಲ್ಲದೆ, ಚಂದುರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವಂತೆ ಸಾಕಷ್ಟು ಮಂದಿ ಅಭಿಮಾನಿಗಳ ಮನವಿಯೂ ಆಗಿತ್ತು. ಆದರೆ, ಏನೋ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಡಲಿಲ್ಲ. ಇಷ್ಟಕ್ಕೆ ಸುಮ್ಮನೆ ಕೂರದ ಚಂದು, ತೆರೆಮರೆಯಲ್ಲಿ ಕೂತು ಕಾಫಿ ಹೊಸ ಕಸರತ್ತು ಶುರುಮಾಡಿದ್ದಾರೆ.

ತಮ್ಮ ಪರವಾಗಿ ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ. ಅದರ ಪ್ರಕಾರ, ಎಲ್ಲರ ಬಳಿ ತೆರಳಿ ಕಾಫಿನಾಡಿನ ಚಂದು ಅವರನ್ನು ಬಿಗ್‌ಬಾಸ್‌ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್ ಮಾಡಿಸುತ್ತಿದ್ದಾರಂತೆ. ಇದೀಗ ಈ ಬಗ್ಗೆ ಎಲ್ಲೆಲ್ಲೂ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ಮುಂದಿನ ದಿನಗಳಲ್ಲಿ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಮೂಲಕ ಕಾಲಿಟ್ಟರೂ ಆಶ್ಚರ್ಯ ಏನಿಲ್ಲ‌.

Leave A Reply