ಯಂಗ್ ಲೇಡಿಯನ್ನು ಮ್ಯಾರೇಜ್ ಆದ ಬಚ್ಚು ಬಾಯಿಯ ಚಪಲ ವೃದ್ಧ

ಸಾಮಾನ್ಯವಾಗಿ ಮದುವೆ ಅಂದ್ರೆ ಯಂಗ್ ಲೇಡಿ ಆಂಡ್ ಯಂಗ್ ಬಾಯ್ ವಧು-ವರರಾಗಿ ಮಿಂಚುತ್ತಿರುತ್ತಾರೆ. ಆದ್ರೆ,  ಯಾರು ಯಾರ ಕೈ ಹಿಡಿಬೇಕು ಎಂದು ಮೇಲಿರೋ ಭಗವಂತ ಮೊದಲೇ ಗೀಚಿಡುತ್ತಾನೆ. ಹೀಗಾಗಿ, ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಅನ್ನಬೇಕಾಷ್ಟೇ. ಆದ್ರೆ ಇಲ್ಲೊಂದು ವೃದ್ಧನ ಲಕ್ ಓ ಲಕ್..

 

ಹೌದು. ವೃದ್ಧನೋರ್ವನಿಗೆ ಯುವತಿಯೊಂದಿಗೆ ಮದುವೆ ಆಗಿದೆ. ಆತನ ಸಂತೋಷಕ್ಕೆ ಮಾತ್ರ ಪಾರವೇ ಇಲ್ಲದಂತಾಗಿದೆ. ಬಾಯಲ್ಲಿ ಹಲ್ಲು ಇಲ್ಲದಿದ್ದರೂ, ಅವರ ತುಟಿ ಅಂಚಿನ ಮುಗುಳ್ನಗೆ ಅವರ ಮನಸ್ಸಿನ ಖುಷಿಯನ್ನು ತೊರ್ಪಡಿಸುತ್ತಿದೆ. ಆದ್ರೆ, ಇಲ್ಲಿ ಮದುಮಗಳು ಮಾತ್ರ ಆಕಾಶವೇ ಕಳಚಿ ಬಿದ್ದಂತೆ ಮೌನಿಯಾಗಿದ್ದಾಳೆ. ಇಂತಹ ಒಂದು ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ಇರುವಂತೆ, ವಯಸ್ಸಾದ ವ್ಯಕ್ತಿ ಚಿಕ್ಕ ಹುಡುಗಿಯನ್ನು ಮದುವೆಯಾಗಿರುವುದನ್ನು ನೋಡಬಹುದು. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಸಾಮಾಜಿಕ ಜಾಲತಾಣಗಳ ಪ್ರತಿ ವೇದಿಕೆಯಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮದುವೆಯಾದ ನಂತರ ವೃದ್ಧ ತನ್ನ ವಧುವಿನ ಜೊತೆಗೆ ಅತಿಥಿಗಳ ಶುಭಾಶಯಗಳನ್ನು ಸ್ವೀಕರಿಸಲು ತೊಡಗಿರುವುದನ್ನು ನೀವು ನೋಡುತ್ತೀರಿ. ಆದ್ರೆ, ಈ ಮದುವೆಯಲ್ಲಿ ಹುಡುಗಿ ಸಂತೋಷವಾಗಿಲ್ಲ ಎಂದು ಅವಳ ಹಾವಭಾವದಿಂದ ತೋರುತ್ತದೆ.

ಇವರ ಜೋಡಿ ಕಂಡು ಅನೇಕರು ಶಾಕ್ ಆಗಿದ್ದಾರೆ. ತಮಾಷೆ ಅಂದ್ರೆ ಇವರ ಮದುವೆಯ ವೀಡಿಯೋ ಎಡಿಟ್ ಆಗಿದ್ದು, ಸಿಂಗಲ್ ಆಗಿರೋ ಯುವಕರ ನೋವನ್ನು ಎತ್ತಿ ಹಿಡಿದಿದೆ. ಈ ಅಜ್ಜನಿಗೆ ಸಿಕ್ಕ ಭಾಗ್ಯ ನಮಗಿಲ್ವೇ ಎನ್ನುತ್ತಾ ತಲೆ ಕೆಡಿಸಿಕೊಂಡಿರುವ ದೃಶ್ಯ ಕಾಣಬಹುದಾಗಿದೆ.

psycho_biihari ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಅಪ್‌ಲೋಡ್ ಮಾಡಲಾಗಿದ್ದು, ಈ ವೀಡಿಯೋ ನಿಜವಾಗಿ ನಡೆದಿದೋ ಅಥವಾ ಸ್ಕ್ರಿಪ್ಟ್ ಮಾಡಿರುವ ವಿಡಿಯೋವಾ ಎಂದು ತಿಳಿದು ಬಂದಿಲ್ಲ. ಒಟ್ಟಾರೆ ಈ ಯಂಗ್ ಲೇಡಿ ವೆಡ್ಸ್ ಅಜ್ಜನ ಮದುವೆ ಅಂತೂ ಫುಲ್ ಫೇಮಸ್ ಆಗಿದೆ.

https://www.instagram.com/p/ChEbcQijsoo/?utm_source=ig_web_copy_link

Leave A Reply

Your email address will not be published.