ಇನ್ಮುಂದೆ ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಮ್ ಚಾಟ್ ಮತ್ತಷ್ಟು ಸೇಫ್ | ಹೇಗೆ ಅಂತಿರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Share the Article

ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮೆಸ್ಸೆಂಜರ್ ಮತ್ತು ಇನ್ ಸ್ಟಾಗ್ರಾಮ್ ಚಾಟ್ ನಲ್ಲಿ ಹೊಸ ಫೀಚರ್​ ಪರೀಕ್ಷೆಗೆ ಮೇಟಾ ಕಂಪನಿ ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ‌ ಫೇಸ್‌ಬುಕ್ ಮೆಸೆಂಜರ್, ಇನ್​ಸ್ಟಾಗ್ರಾಮ್​ ಚಾಟ್​ ಮತ್ತಷ್ಟು ಸೇಫ್ ಆಗಿ ಕಾರ್ಯ ನಿರ್ವಹಿಸಲಿದೆ.

ಈ ಕುರಿತು, “ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯಾಕಪ್ ಮಾಡಲಾದ ಚಾಟ್ ಸಂಭಾಷಣೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯದೊಂದಿಗೆ ಸುರಕ್ಷಿತಗೊಳಿಸಲಾಗುವುದು” ಎಂದು ಮೆಟಾ ಬಹಿರಂಗಪಡಿಸಿದೆ. ಆಕಸ್ಮಿಕವಾಗಿ ಫೋನ್ ಕಳೆದು ಹೋದರೆ, ಹೊಸ ಫೋನ್‌ನಲ್ಲಿ ಬ್ಯಾಕಪ್‌ನಲ್ಲಿರುವ ಚಾಟ್ ಸಂಭಾಷಣೆಗಳನ್ನು ಇತರರ ಕೈಗೆ ಸಿಗದಂತೆ ಮರುಪಡೆಯಲು ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ.

ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಡೇಟಾ ಸುರಕ್ಷತೆಗಾಗಿ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡುವುದು ಹಾಗೂ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯಾಕಪ್ ಮಾಡಲಾದ ಚಾಟ್ ಸಂಭಾಷಣೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯದೊಂದಿಗೆ ಸುರಕ್ಷಿತಗೊಳಿಸಲಾಗುತ್ತದೆ ಎಂದು ಮೆಟಾ ಕಂಪನಿ ಘೋಷಿಸಿದೆ. ಹೆಚ್ಚಿನ ಬಳಕೆದಾರರು ಭವಿಷ್ಯದ ಅಗತ್ಯಗಳಿಗಾಗಿ ತಮ್ಮ ಚಾಟ್ ಸಂಭಾಷಣೆಗಳನ್ನು ಬ್ಯಾಕಪ್ ಪಡೆಯಲು ಇಚ್ಛಿಸುತ್ತಾರೆ. ಹಾಗಾಗಿ ಹೊಸ ಫೋನ್‌ನಲ್ಲಿ ಬ್ಯಾಕಪ್‌ನಲ್ಲಿರುವ ಚಾಟ್ ಸಂಭಾಷಣೆಗಳನ್ನು ಮರುಪಡೆಯಲು ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ ಎಂದು ಮೆಟಾ ಕಂಪನಿ ಹೇಳುತ್ತಿದೆ.

ಈ ಫೀಚರ್ ನ ಮತ್ತೊಂದು ಉಪಯೋಗ ಎಂದರೆ, ಫೋನ್ ಆಕಸ್ಮಿಕವಾಗಿ ಕಳೆದುಹೋದರೆ ಮತ್ತು ಅವರ ಮಾಹಿತಿಯು ಇತರರ ಕೈಗೆ ಸೇರುವುದಿಲ್ಲ. ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯದ ಭಾಗವಾಗಿ ಮೆಟಾ ತನ್ನ ಬಳಕೆದಾರರಿಗೆ ಎರಡು ಆಯ್ಕೆಗಳನ್ನು ಒದಗಿಸುತ್ತದೆ. ಫೋನ್ ಕಳೆದುಹೋದರೆ ಪಿನ್ ಅಥವಾ ಕೋಡ್ ಸಹಾಯದಿಂದ ಡೇಟಾವನ್ನು ಹಿಂಪಡೆಯಬಹುದು. ಇವುಗಳ ಜೊತೆಗೆ ಮೂರನೇ ವ್ಯಕ್ತಿಯ ಕ್ಲೌಡ್ ಸೇವೆಗಳ ಮೂಲಕ ಅದನ್ನು ಮರುಸ್ಥಾಪಿಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಕಂಪನಿ ತಿಳಿಸಿದೆ.

ಪ್ರಸ್ತುತ ಮೆಸೆಂಜರ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯದ ಭಾಗವಾಗಿ ವ್ಯಾನಿಶಿಂಗ್ ಮೋಡ್ ಮತ್ತು ಡಿಸ್ಪಿಯರಿಂಗ್ ಮೆಸೇಜಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿದ ನಂತರ ಮತ್ತು ಚಾಟ್ ಮಾಡಿದ ನಂತರ ಸಂಭಾಷಣೆಗಳು ನಿಗದಿತ ಸಮಯದ ನಂತರ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ. ಇವುಗಳಲ್ಲಿ ವ್ಯಾನಿಶ್ ಮೋಡ್ ವೈಶಿಷ್ಟ್ಯವನ್ನು ತೆಗೆದುಹಾಕಲಾಗುತ್ತದೆ. ಇನ್​ಸ್ಟಾಗ್ರಾಂನಲ್ಲಿ ವ್ಯಾನಿಶ್ ಮೋಡ್ ಬಳಕೆದಾರರಿಗೆ ಲಭ್ಯವಿರುತ್ತದೆ ಎಂದು ಮೆಟಾ ಹೇಳಿದೆ.

Leave A Reply

Your email address will not be published.