ಹನಿಟ್ರ್ಯಾಪ್ ಆರೋಪ : ಸ್ಯಾಂಡಲ್ ವುಡ್ ನಟ ಅರೆಸ್ಟ್ !!!!

ಬೆಂಗಳೂರು : ಹುಡುಗಿಯರು ಹುಡುಗರನ್ನು ಏಮಾರಿಸೋಕೆ ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಉದಯೋನ್ಮುಖ ನಟನೋರ್ವ ಹುಡುಗಿಯರ ಹೆಸರಲ್ಲಿ ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ಚಮಾಡಿದ ಘಟನೆ ನಡೆದಿದ್ದು, ಈ ನಟನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

 

ಉದ್ಯಮಿಗೆ ಹನಿಟ್ರ್ಯಾಪ್ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಯುವರಾಜ್ ನನ್ನು ಹುಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಟ ಯುವರಾಜ್ ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ್ದ ಎನ್ನಲಾಗಿದ್ದು, ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ಆರೋಪಿ ನಾಯಕನಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ನಟ ಯುವರಾಜ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ.

ನಂತರ ಉದ್ಯಮಿಗೆ ಬೇಟಿಯಾಗಿದ್ದು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿ ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಉದ್ಯಮಿಗೆ ಅನುಮಾನ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.