ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಅಂಗವಾಗಿ ರಿಲಯನ್ಸ್​ ಜಿಯೋ ನೀಡುತ್ತಿದೆ ಹೊಸ ಆಫರ್

75ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶಾದ್ಯಂತ ಅದ್ದೂರಿ ತಯಾರಿ ನಡೆಯುತ್ತಿದೆ. ಈ ನಡುವೆ ವಿವಿಧ ಕಂಪನಿಗಳು ಈ ಸಂಭ್ರಮಾಚರಣೆ ಭಾಗವಾಗಿ ಆಫರ್ ​ಗಳನ್ನು ಪ್ರಕಟಿಸುತ್ತಿದ್ದು, ಇದೀಗ ರಿಲಯನ್ಸ್​ ಜಿಯೋ ಕೂಡ ಹೊಸ ಆಫರ್​ ಪ್ರಕಟಿಸಿದೆ.

ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಸ್ವಾತಂತ್ರ್ಯೋತ್ಸವ ಕೊಡುಗೆ ಮತ್ತು ಉಚಿತ ಪ್ರಯೋಜನಗಳ ಕುರಿತು ಘೋಷಿಸಿದ್ದು, ಈ ಕೊಡುಗೆಯು ವಾರ್ಷಿಕವಾಗಿ ರೀಚಾರ್ಜ್​ ಮಾಡುವವರಿಗೆ ದೀರ್ಘಾವಧಿಯ ಯೋಜನೆಯಾಗಿದೆ. ದಿನಕ್ಕೆ ನಿರ್ದಿಷ್ಟ ಜಿಬಿ ಡೇಟಾವನ್ನು ವರ್ಷ ಪೂರ್ತಿ ಬಳಸಬಹುದು, ಜೊತೆಗೆ ಕೆಲವು ಇತರ ಪ್ರಯೋಜನಗಳನ್ನು ಸೇರಿ ಒಟ್ಟು 3,000 ರೂ. ಆಫರ್​ ನೀಡುತ್ತದೆ. ಈ ಆಕರ್ಷಕ ಸ್ಕೀಮ್​ನಲ್ಲಿ ಹೆಚ್ಚುವರಿ ಬೋನಸ್​ಗಳ ಜೊತೆಗೆ ವಿಡಿಯೊ ಸ್ಟ್ರೀಮಿಂಗ್​ ಸೇವೆಗೆ ಒಂದು ವರ್ಷದ ಮೌಲ್ಯದ ಎಂಟ್ರಿ ಸೇರಿಸಲಾಗಿದೆ.

“ಜಿಯೋದ 2999 ಇಂಡಿಪೆಂಡೆನ್ಸ್​ ಆಫರ್​ನೊಂದಿಗೆ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಿ ಮತ್ತು 3000 ಮೌಲ್ಯದ ಉಚಿತ ಪ್ರಯೋಜನ ಪಡೆದು ಆನಂದಿಸಿ ಎಂದು ರಿಲಯನ್ಸ್​ ಜಿಯೋ ಹೇಳಿಕೊಂಡಿದೆ. ಈ ಯೋಜನೆಯಲ್ಲಿ ಪ್ರತಿ ದಿನ 2.5 ಜಿಬಿಯಂತೆ 365 ದಿನವೂ ಬಳಸಬಹುದು. ಇದರರ್ಥ ಬಳಕೆದಾರರು ಈ ಪ್ಯಾಕ್​ನೊಂದಿಗೆ ಒಟ್ಟು 912.5 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ. ದಿನನಿತ್ಯದ ಡೇಟಾ ಖಾಲಿಯಾದ ನಂತರ ಮತ್ತು ಡೇಟಾ ವೇಗ ಬಳಕೆದಾರರು ಹೆಚ್ಚಿನ ಅಗತ್ಯವಿದ್ದಲ್ಲಿ ಯಾವಾಗಲೂ ಟಾಪ್​ಅಪ್​ಗಳನ್ನು ಸೇರಿಸಬಹುದು.

ಯೋಜನೆಯು ದಿನಕ್ಕೆ 100 ಎಸ್​ಎಂಎಸ್​ ಮತ್ತು ಯಾವುದೇ ನೆಟ್​ವರ್ಕ್​ಗೆ ಅನಿಯಮಿತ ಧ್ವನಿ ಕರೆ ಮಾಡಬಹುದು.  ರಿಲಯನ್ಸ್​ ಜಿಯೋ ಒಂದು ವರ್ಷದ ಡಿಸ್ನಿ+ ಹಾಟ್​ಸ್ಟಾರ್​ ಚಂದಾದಾರಿಕೆಯನ್ನು ಸಹ ನೀಡುತ್ತದೆ, ಇದು ರೂ 499 ಮೌಲ್ಯದ್ದಾಗಿದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮಾ ನಂತಹ ಇತರ ಜಿಯೋ ಸೇವೆಗಳನ್ನು ನೀಡುತ್ತದೆ. ಒಮ್ಮೆ ನೀವು ಖರೀದಿಸಿದ ಯೋಜನೆಯು 365 ದಿನಗಳವರೆಗೆ ಮಾನ್ಯವಾಗಿರುತ್ತದೆ.

Leave A Reply

Your email address will not be published.