“ರಸ್ತೆ ನಮ್ಮಪ್ಪಂದು” ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಎಣ್ಣೆ ಹೊಡೆದ ಸ್ಟಾರ್ ಗೆ ಎದುರಾಯ್ತು ಸಂಕಷ್ಟ

ವಾಹನಗಳು ಓಡಾಡುವ ರಸ್ತೆಯಲ್ಲಿ ಚೇರ್ ಹಾಕಿ ಕುಳಿತ ವ್ಯಕ್ತಿಯೋರ್ವ ಮದ್ಯ ಸೇವಿಸಿದ ವೀಡಿಯೋವೊಂದು “ರಸ್ತೆ ನಮ್ಮಪ್ಪನಿಗೆ ಸೇರಿದ್ದು” ಎಂಬ ಸಾಂಗ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇನ್ ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಬಾಬಿ ಕಟಾರಿಯಾ ಜುಲೈ 28ರಂದು ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದ. ಅದರಲ್ಲಿ ರಸ್ತೆ ಮೇಲೆ ಎಂಜಾಯ್ ಮಾಡುವ ಸಮಯವಿದು ಎಂದು ಅಡಿಬರಹ ನೀಡಿದ್ದ. ವೀಡಿಯೋದಲ್ಲಿ ಡೆಹ್ರಾಡೂನ್‌ನ ವಾಹನ ನಿಬಿಡ ರಸ್ತೆಯ ಮಧ್ಯದಲ್ಲೇ ಕುರ್ಚಿ ಮತ್ತು ಟೇಬಲ್ ಹಾಕಿಕೊಂಡು ಕುಳಿತು ಮದ್ಯ ಸೇವಿಸುತ್ತಿರುವ ದೃಶ್ಯವಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಕಟಾರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ಕಟಾರಿಯಾ ಆಪ್ತರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ, ರೋಡ್ ಆಪ್ನೆ ಬಾಪ್ ಕಿ (ರಸ್ತೆ ನಮ್ಮಪ್ಪನಿಗೆ ಸೇರಿದ್ದು) ಎಂಬ ಹಾಡನ್ನು ವಿಡಿಯೋ ಬ್ಯಾಕ್‌ಗ್ರಂಡ್ ಹಾಕಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿ ಕ್ರಮಕ್ಕೆ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರಾಖಂಡದ ಪೊಲೀಸರು ದೂರು ದಾಖಲಿಸಿದ್ದಾರೆ.

ಅಂದಹಾಗೆ, ಗುರುಂಗಾವ್ ಮೂಲದ ಕಟಾರಿಯಾ ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈ ವೀಡಿಯೋ ಮೂಲಕ ಫುಲ್ ಫೇಮಸ್ ಆಗಿದ್ದ. ಇದೀಗ ಈತ ಪೊಲೀಸ್ ಹಿಂದೆ ಅಲೆಯೋತರ ಆಗಿದೆ.

https://www.instagram.com/reel/CgjR5GohFKp/?utm_source=ig_web_copy_link
Leave A Reply

Your email address will not be published.