ಮದುವೆ ಎಂಬುದು ಹೇಳಲು ಆಡಂಬರವಾದರೂ ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ. ಎಲ್ಲರೂ ಮದುವೆ ಸಂಭ್ರಮಿಸುತ್ತಿದ್ದರೆ, ಇತ್ತ ಪೋಷಕರು ಮನದೊಳಗೆ ಭಯ ಇಟ್ಟುಕೊಂಡಿರುತ್ತಾರೆ. ಯಾಕಂದ್ರೆ ಎಲ್ಲಿ ಏನೂ ಎಡವಟ್ಟು ಆಗುತ್ತೋ ಎಂದು. ಅದೇ ರೀತಿ ಇಲ್ಲೊಂದು ಕಡೆ ಘಟನೆ ನಡೆದಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಆಕ್ರೋಶಗೊಂಡ ವರನ ಕುಟುಂಬಸ್ಥರು ವಧುವಿನ ತಂದೆಯ ಮೂಗನ್ನೇ ಕತ್ತರಿಸಿ ಹಾಕಿರುವ ಭಯಾನಕ ಘಟನೆ ನಡೆದಿದೆ.
ಈ ಘಟನೆ ರಾಜಸ್ಥಾನದ ಬಾರ್ಮರ್‌ನ ಝಪಾಲಿ ಎಂಬ ಗ್ರಾಮದಲ್ಲಿ ನಡೆದಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಆಕ್ರೋಶಗೊಂಡ ವರನ ಕುಟುಂಬಸ್ಥರು ವಧುವಿನ ತಂದೆಯ ಮೂಗನ್ನೇ ಹರಿತವಾದ ಆಯುಧಗಳಿಂದ ಕತ್ತರಿಸಿ ಹಾಕಿದ್ದಾರೆ.
ಕಮಲ್ ಸಿಂಗ್ ಈ ಮೊದಲು ತನ್ನ ಸೋದರ ಸೊಸೆಯನ್ನು ಅದೇ ಮನೆಗೆ ಮದುವೆ ಮಾಡಿಕೊಟ್ಟಿದ್ದ. ಆದ್ರೆ ಆ ಕುಟುಂಬಸ್ಥರು ಅವಳನ್ನು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ, ಮಾಹಿತಿ ತಿಳಿದು ಬರುತ್ತಿದ್ದಂತೆ ಕಮಲ್ ಸಿಂಗ್, ತನ್ನ ಮಗಳ ಮದುವೆಯನ್ನು ರದ್ದು ಮಾಡಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದೆ.
ಇದರಿಂದ ಸಿಟ್ಟಿಗೆದ್ದ ವರನ ಕಡೆಯವರು ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ಕಮಲ್ ಸಿಂಗ್‌ನ ಮೂಗನ್ನೇ ಕತ್ತರಿಸಿ ಹಾಕಿ ಹೋಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವಧುವಿನ ತಂದೆ ಕಮಲ್ ಸಿಂಗ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.