ಕಾಲೇಜಿನಲ್ಲಿ ತಬ್ಬಿಕೊಂಡು ವಿದ್ಯಾರ್ಥಿಗಳ ಕುಣಿತ | ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್, 7 ವಿದ್ಯಾರ್ಥಿಗಳ ಅಮಾನತು
ಈ ಕಾಲೇಜೊಂದರ ವಿದ್ಯಾರ್ಥಿಗಳು 11 ನೇ ತರಗತಿ ಸೇರಿ, 15 ದಿನಗಳೇ ಆಗಿದ್ದವು. ಆದರೆ ಕಾಲೇಜಿನಲ್ಲಿ ತಬ್ಬಿಕೊಂಡು 7 ಜನ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದಾರೆ. ಈಗ ಈ ತಬ್ಬುವಿಕೆ ವಿದ್ಯಾರ್ಥಿಗಳ ಪಾಲಿಗೆ ರಿವರ್ಸ್ ಹೊಡೆದಿದೆ. ಈ ಆಘಾತಕಾರಿ ಘಟನೆ ನಡೆದಿರುವುದು ಅಸ್ಸಾಮಿನ ಸಿಲ್ಟಾರ್ನ ರಾಮಾನುಜ್ ಗುಪ್ತಾ ಎಂಬ ಖಾಸಗಿ ಕಾಲೇಜಿನಲ್ಲಿ .
11ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಸ್ಪರ ತಬ್ಬಿಕೊಂಡು ಕುಣಿಯುತ್ತಿದ್ದುದನ್ನು ಅದೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಕೂಡಲೇ ಇದು ವೈರಲ್ ಆಗಿದೆ. ಈ ಘಟನೆ ಕಾಲೇಜಿನ ಆಡಳಿತ ಮಂಡಳ ಗಮನಕ್ಕೆ ಬಂದಿದೆ. ತಕ್ಷಣವೇ ವಿದ್ಯಾರ್ಥಿಗಳನ್ನು ಕಾಲೇಜಿಗೆ ಹಾಜರಾಗದಂತೆ ನಿರ್ಬಂಧ ವಿಧಿಸಿಲಾಗಿದೆ. ಏಳು ಜನರಲ್ಲಿ ನಾಲ್ಕು ಹುಡುಗಿಯರು ಮೂರು ಹುಡುಗರಿದ್ದಾರೆ. ವಿದ್ಯಾರ್ಥಿಗಳ ಅನುಚಿತ ವರ್ತನೆಗೆ ಕಾಲೇಜು ಮಂಡಳಿಯು ನೋಟೀಸ್ ನೀಡಿದೆ. ಅಷ್ಟು ಮಾತ್ರವಲ್ಲದೇ ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದ ಕಾರಣ ನಿರ್ಧಿಷ್ಠ ಅವಧಿಯವರೆಗೆ ತರಗತಿಗಳಿಗೆ ಹಾಜರಾಗದಂತೆ ಅಮಾನತು ಮಾಡಿದ್ದಾರೆ.
‘ಶಿಕ್ಷಕರು ಇಲ್ಲದ ಸಮಯದಲ್ಲಿ ಊಟದ ಬಿಡುವಿನ ವೇಳೆ ವಿದ್ಯಾರ್ಥಿಗಳು ಹೀಗೆ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಕಾಲೇಜು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಅಲ್ಲದೆ, ಕ್ಯಾಂಪಸ್ನಲ್ಲಿ ಮೊಬೈಲ್ ಫೋನ್ಗಳನ್ನೂ ನಿಷೇಧಿಸಲಾಗಿದೆ. ಈ ವಿದ್ಯಾರ್ಥಿಗಳು 11ನೇ ತರಗತಿಗೆ ಹಾಜರಾಗಿ ಕೇವಲ ಹದಿನೈದು ದಿನಗಳಷ್ಟೇ ಕಳೆದಿವೆ’ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಅಮಾನತುಗೊಳಿಸಿದ ವಿದ್ಯಾರ್ಥಿಗಳ ಪೋಷಕರನ್ನು ಕೂಡಾ ಕರೆಸಿ ಸಮಾಲೋಚನೆ ಮಾಡಲಾಗಿದೆ. ಈ ಘಟನೆಯ ನಂತರ ಕಾಲೇಜು ಮಂಡಳಿ ಶಿಸ್ತಿನ ವಿಷಯವಾಗಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕ್ರಮ ತೆಗೆದುಕೊಂಡಿದೆ.