ಈ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಮಹಿಳೆಯರಿಗೆ 1,000 ರೂಪಾಯಿ ತಿಂಗಳ ಸಂಬಳ

ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎಎಪಿ ಅಧಿಕಾರಕ್ಕೆ ಬಂದರೆ ಎಲ್ಲಾ ವಯಸ್ಕ ಮಹಿಳೆಯರಿಗೆ 1,000 ರೂ. ತಿಂಗಳ ಭತ್ಯೆ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಭರವಸೆ ನೀಡಿದ್ದಾರೆ.

ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರ ಪ್ರಚಾರದ ಭಾಗವಾಗಿ, ಎಲ್ಲಾ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ವೇತನ ನೀಡುವ ಮಾತಾಡಿದ್ದಾರೆ ಕೇಜ್ರಿವಾಲ್.


Ad Widget

Ad Widget

Ad Widget

Ad Widget

Ad Widget

Ad Widget

ನಾವು ಮಹಿಳೆಯರಿಗೆ ಪುಕ್ಕಟೆಯಾಗಿ 1,000 ರೂ.( ತಿಂಗಳ ಭತ್ಯೆ) ನೀಡುತ್ತಿಲ್ಲ. ಇದು ನಿಮ್ಮ ಹಕ್ಕು. ಜನರ ದುಡ್ಡು, ಜನರಿಗೆ ಹೋಗಲಿ, ಸ್ವೀಸ್ ಬ್ಯಾಂಕ್ ಗೆ ಹೋಗುವುದು ಬೇಡ ಎಂದು ನೂರಾರು ಮಹಿಳೆಯರ ಮುಂದೆ ಕೇಜ್ರಿವಾಲ್ ಪ್ರಕಟಿಸಿದರು.

ಈ ಹಿಂದೆ ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಕುಟುಂಬಕ್ಕೆ 300 ಯೂನಿಟ್ ಉಚಿತ ವಿದ್ಯುತ್ ಮತ್ತು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ. 3,000 ಭತ್ಯೆ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದರು. ಅಲ್ಲದೆ, ದೆಹಲಿಯಲ್ಲಿ ಉಚಿತ ನೀರು ಮತ್ತು ವಿದ್ಯುತ್ ನೀದುತ್ತಾ ಬಂದಿದ್ದಾರೆ.

error: Content is protected !!
Scroll to Top
%d bloggers like this: