ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ| ಪರಿಸ್ಥಿತಿ ಗಂಭೀರ, ಅಭಿಮಾನಿಗಳಲ್ಲಿ ಆತಂಕ

Share the Article

ಬಾಲಿವುಡ್ ನ ಹಾಸ್ಯಗಾರ ಭಾರೀ ಜನಮನ್ನಣೆ ಗಳಿಸಿದ ಹಾಸ್ಯ ನಟ, ರಾಜು ಶ್ರೀವಾಸ್ತವ್ ಆರೋಗ್ಯ ಗಂಭೀರವಾಗಿದೆ ಎಂದು ವರದಿಯಾಗಿದೆ.

ನಿನ್ನೆ ದೆಹಲಿಯ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಬಾಲಿವುಡ್‌ ಹಾಸ್ಯನಟ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಹೋಟೆಲ್‌ನಲ್ಲಿ ಮಧ್ಯಾಹ್ನದ ವೇಳೆ ತಾಲೀಮು ನಡೆಸುತ್ತಿದ್ದರು. ಆಗ ಟ್ರೆಡ್‌ಮಿಲ್‌ನಲ್ಲಿದ್ದ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ಅವರಿಗೆ ಲಘು ಹೃದಯಾಘಾತವಾಗಿತ್ತು

ರಾಜು ಶ್ರೀವಾಸ್ತವ್ ಅವರ ಆರೋಗ್ಯ ಗಂಭೀರವಾಗಿದೆ. ತುರ್ತು ಚಿಕಿತ್ಸಾ ವೈದ್ಯರ ತಂಡ ನಟನನ್ನು ಕಾರ್ಡಿಯಾಕ್‌ ಯೂನಿಟ್‌ಗೆ ಶಿಫ್ಟ್‌ ಮಾಡಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದಾರೆ. ವೈದ್ಯರ ಪ್ರಕಾರ “ಶ್ರೀವಾಸ್ತವ ಅವರ ಆಂಜಿಯೋಗ್ರಫಿಯಲ್ಲಿ ಶೇ. 100 ಬ್ಲಾಕೇಜ್‌ ಕಂಡುಬಂದಿದೆ. ಸದ್ಯ ಅವರು ವೆಂಟಿಲೇಟರ್‌ ಸಹಾಯದಲ್ಲಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿದೆ” ಎಂದು ವರದಿಯಾಗಿದೆ.

Leave A Reply