BIGG BOSS OTT : ‘ಒಂದು ಬಿಟ್ಟರೆ ತಲೆ ಮೂಗು ಓಪನ್ ಆಗ್ಬೇಕು’ ಆರ್ಯವರ್ಧನ್ ಗುಡುಗು | ಮಿತಿಮೀರಿದ ಟಾಸ್ಕ್ ಆರ್ಭಟ

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಆರಂಭವಾಗಿದ್ದು, ಈಗ ಸ್ಪರ್ಧಿಗಳ ಮಧ್ಯೆ ಅಸ್ಲಿ ಫೈಟ್ ಶುರುವಾಗಿದೆ. ಮೊದಲ ಎರಡು ದಿನ ಇದ್ದ ಪ್ರೀತಿ ಈಗ ಬೇರೆನೇ ರೂಪ ಪಡೆದಿದೆ. ಏಕೆಂದರೆ ಈಗ ಟಾಸ್ಕ್ ಬಂದಿದೆ. ನಿನ್ನೆ ಬಿಗ್ ಬಾಸ್ ಜಿಗಿದಂಡ ಎಂಬ ಆಟ ನೀಡಿದ್ದರು‌. ಆ ವೇಳೆ ಆಟಕ್ಕೆ ನಿಂತ ಸ್ಪರ್ಧಿಗಳ ಮೇಲೆ ಸೋಪಿನ ನೀರು ಹಾಕಿದ್ರು, ದಿಂಬಿನಿಂದ ಹೊಡೆದ್ರು, ಒದ್ದೆ ಬಟ್ಟೆ ಹಾಕಿದ್ರು ಅಂತೆಲ್ಲ ದೊಡ್ಡ ಮಾರಾಮಾರಿ ಆಗಿದೆ. ತಮ್ಮ ತಂಡದ ಸ್ಪರ್ಧಿಗಳನ್ನು ರಕ್ಷಿಸಲು ಹೋಗಿ, ಆರ್ಯವರ್ಧನ್ ನನ್ನನ್ನು ದೂಡಿದ್ದಾರೆ ಎಂದು ಉದಯ್ ಸೂರ್ಯ ಆರೋಪ ಮಾಡಿದ್ದಾರೆ. ಉದಯ್ ಸೂರ್ಯ ಅವರು ತನ್ನ ಮೇಲೆ ಹಳೆ ಸಿಟ್ಟು ಇಟ್ಟುಕೊಂಡು ಮತ್ತೆ ಮತ್ತೆ ದೂಡಿದ್ದಾರೆ ಎಂದು ಆರ್ಯವರ್ಧನ್ ಕೂಗಾಡಿದ್ದಾರೆ.


Ad Widget

ಒಟ್ಟಿನಲ್ಲಿ ಆಟದ ವಿಚಾರವಾಗಿ ಆರ್ಯ, ಉದಯ್ ಮಧ್ಯೆ ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದ್ದು, ಒಂದೇ ಸಮನೆ ಆರ್ಯವರ್ಧನ್ ಗುರೂಜಿ ಆಕ್ರೋಶಗೊಂಡಿದ್ದಾರೆ.

“ನಾನು ಗೇಮ್ ಆಡ್ತಿದೀನಿ, ನಿಂಗೆ ನಾನು ಬೈದಿಲ್ಲ, ನನಗೆ ಯಾಕೆ ಹೊಡೆಯೋಕೆ ಬಂದೆ, ಹಳೆ ಕೋಪ ಇಟ್ಟುಕೊಂಡು ಬಂದ್ರೆ, ನಾನು ಒಂದುಸಲ ತಳ್ಳಿದ್ರೆ 25 ಅಡಿ ಆಚೆ ಹೋಗ್ತಿಯಾ, ನಾನು ತಳ್ಳಿಲ್ಲ, ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಇದನ್ನೆಲ್ಲ ಕೋತಿಗಳ ಹತ್ರ ಇಟ್ಕೊಳ್ಳಿ, ತೆಗೆದು ಇಕ್ಕಿದ್ರೆ ಬಾಳೆಯಲ್ಲಿ ತಿಂದುಬಿಡ್ತೀನಿ. ಒಂದು ಬಿಟ್ಟರೆ ತಲೆ, ಮೂಗು ಓಪನ್ ಆಗೋದು, ಕೊಬ್ಬಲ್ಲಿ ಮಾತನಾಡ್ತೀನಿ ಅಂದ್ರೆ ಬಾಡಿಲಿ ಕೊಬ್ಬಿರಬೇಕು. ಬಾಯಿಯನ್ನು ನೆಟ್ಟಗೆ ಇಟ್ಟುಕೊಂಡು ಮಾತನಾಡಿ, ಯಾವನೋ ಮಧ್ಯೆ ಮಾತಾಡೋಕೆ ಬಂದೆ. ನಾನು ಗೇಮ್ ಆಡೋಕೆ ಬಂದ್ರೆ ನನ್ನನ್ನೇ ಟಾರ್ಗೆಟ್ ಮಾಡ್ತಾನೆ. ನನಗೆ ವಯಸ್ಸಾಗಿರಬಹುದು, ದಪ್ಪ ಆಗಿರಬಹುದು, ಯಾವುದರಲ್ಲಿಯೂ ಕಮ್ಮಿ ಇಲ್ಲ. ನಾನು ಕೂಲ್ ಆಗಲ್ಲ, ಬದನೆಕಾಯಿ” ಎಂದು ಆರ್ಯವರ್ಧನ್ ಗುರೂಜಿ
ಅವರು ಕೂಗಾಡಿದ್ದಾರೆ.


Ad Widget

ಇದಾದ ನಂತರ ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಮಧ್ಯೆ ಮತ್ತೆ ಮಾತುಕತೆ ನಡೆದಿದೆ. ಆಗ ರಾಕೇಶ್ ಅವರು “ನೀವು ಬಂದಿದ್ದು ಕೂಗಾಡಿದ್ದು ನೋಡಿ ನನಗೆ ಹೊಡೆಯೋಕೆ ಬಂದ್ರಿ ಅಂತ ಭಯಕ್ಕೆ ಬಿದ್ದೆ. ಅಷ್ಟೆಲ್ಲ ಸಿಟ್ಟಾಗಬೇಡಿ’ ಎಂದಿದ್ದಾರೆ. ಆಗ ಆರ್ಯವರ್ಧನ್ ನಕ್ಕಿದ್ದಾರೆ.


Ad Widget
error: Content is protected !!
Scroll to Top
%d bloggers like this: