‘ಬಿಗ್ ಬಾಸ್ ಓಟಿಟಿ’ಯಲ್ಲೂ ಶುರು ಆಯ್ತಾ ಪ್ರೇಮ ಪುರಾಣ | ‘ಲವ್ ಆದ್ರೆ ಲವ್ ಆಗಿದೆ ಅನ್ನು’ ಎಂದು ಸ್ಫೂರ್ತಿಗೆ ರಾಕೇಶ್ ಹೇಳಿದ್ಯಾಕೆ?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್ ಓಟಿಟಿ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ ನಡುವೆ ಆದ್ರೂ ಗುಸು-ಗುಸು, ಪಿಸು-ಪಿಸು ಪ್ರೀತಿ ಬೆಂಕಿ ಹಚ್ಚಿಕೊಳ್ಳುತ್ತಾ ಅನ್ನೋದು. ಓಟಿಟಿಯಲ್ಲೂ ಇಂತಹ ಪ್ರೇಮ ಪ್ರಸಂಗ ಏನಾದ್ರು ಶುರು ಹಚ್ಚಿಕೊಂಡಿದ್ಯಾ ಹೇಗೆ..

 

ಸದ್ಯಕ್ಕೆ ಆಳವಾದ ಪ್ರೀತಿಲಿ ಯಾರೂ ಬಿದ್ದಿಲ್ಲ. ಆದ್ರೆ, ಒಳಗೊಳಗೇ ಏನೇನೂ ನಡೆತಿದೆ ಅನ್ನೋದು ಹೊರಗೆ ಹಾಕಿದ್ರಷ್ಟೇ ಗೊತ್ತಾಗಬೇಕಷ್ಟೆ ಅಲ್ವಾ. ಸದ್ಯ ಈ ಮಧ್ಯೆ ಮನೆಯಲ್ಲಿ ಲವ್ ವಿಚಾರ ಚರ್ಚೆಗೆ ಬರುತ್ತಿದೆ. ಹೌದು. ಸ್ಫೂರ್ತಿ ಗೌಡ ಹಾಗೂ ರಾಕೇಶ್ ಇಬ್ಬರೂ ದಿನ ಕಳೆದಂತೆ ಅನ್ಯೋನ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದ್ದು, ನೋಡುಗರಲ್ಲೂ ಇಂಟರೆಸ್ಟ್ ಮೂಡಿಸುತ್ತಿದೆ.

‘ಬಿಗ್ ಬಾಸ್​’ ಮನೆಯಲ್ಲಿ ರಾಕೇಶ್ ಹಾಗೂ ಸ್ಫೂರ್ತಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೇಮದ ಕುರಿತು ಕೆಲವೊಂದು ಮಾತುಕತೆ ನಡೆದಿದೆ. ಹೌದು. ಸ್ಫೂರ್ತಿಗೆ ರಾಕೇಶ್ ಕೇಳಿದ ಪ್ರಶ್ನೆ ಸ್ವಲ್ಪ ಹೆಚ್ಚೇ ಸದ್ದು ಮಾಡುತ್ತಿದೆ. ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ?’ ಎಂದು ಸ್ಫೂರ್ತಿಗೆ ರಾಕೇಶ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಫೂರ್ತಿ ‘ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ’ ಎಂದಿದ್ದಾರೆ.

‘ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್​ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ’ ಎಂದರು ರಾಕೇಶ್. ‘ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ’ ಎಂದರು. ಒಟ್ಟಾರೆ, ಇವರಿಬ್ಬರ ಡಿಸ್ಕಶನ್ ಒಂದು ಹೆಜ್ಜೆ ಮುಂದುವರಿದಂತಲೇ ಕಾಣುತ್ತಿದೆ.

ಆದ್ರೆ, ಉಳಿದ ಎಪಿಸೋಡ್ ಗಳ ಜೋಡಿಗಳಂತೆ ಈ ಜೋಡಿನೂ ಕಮಿಟ್ ಆಗ್ತಾರ? ಅನ್ನೋದನ್ನ ಎಂಡ್ ವರೆಗೂ ನೋಡಬೇಕಾಗಿದೆ. ಯಾಕಂದ್ರೆ ಇದು ಬಿಗ್ ಬಾಸ್ ಗುರು. ಇಲ್ಲಿ ಮೊದಲಿರುವ ಮನಸ್ಥಿತಿ ಕೊನೆವರೆಗೂ ಇರುತ್ತೆ ಅನ್ನೋಕೆ ಚಾನ್ಸ್ ಯೇ ಇಲ್ಲ.. ಅಂದಹಾಗೆ, ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಅದರಿಂದ ಅರ್ಧಕ್ಕೆ ಓಡಿ ಬಂದರು. ಇಂಜಿನಿಯರಿಂಗ್ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಕಷ್ಟ ಎನಿಸಿದಾಗ ಅವರು ಮಾಡುತ್ತಿರುವ ಕೆಲಸದಿಂದ ಹೊರ ಬರುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಹಲವು ಟಾಸ್ಕ್​ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇದರಿಂದಲೂ ಅರ್ಧಕ್ಕೆ ಓಡಿ ಬರುತ್ತಾರಾ ಎಂಬುದು ನೋಡಬೇಕಾಗಿದೆ..

Leave A Reply

Your email address will not be published.