ಕೊಡಗಿನಲ್ಲಿ ಭೂಕುಸಿತ | ಭಯಭೀತರಾದ ಜನ

Share the Article

ಭಾರೀ ಮಳೆ ಜನ ಜೀವನ ಅಸ್ತವ್ಯಸ್ತ್ಯ ಗೊಳಿಸಿದೆ. ಜನ ಭೂ ಕುಸಿತ, ಗುಡ್ಡ ಕುಸಿತದಿಂದ ವಿಚಲಿತರಾಗಿ ಭಯಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮನೆಯೊಂದರ ಪಕ್ಕದಲ್ಲೇ ಭೂಮಿ ಕುಸಿದೇ ಹೋಗಿದೆ. ಮನೆ ಮಂದಿ ನಿಜಕ್ಕೂ ಇದರಿಂದ ಭಯಭೀತರಾಗಿದ್ದಾರೆ.

ಹೆಚ್.ಎ.ಸೋಮಯ್ಯ ಅವರ ಮನೆ ಬಳಿ‌ ಭೂಮಿ ಕುಸಿದು ಹೋಗಿದೆ. ಮನೆಯಿಂದ 20 ಅಡಿ ದೂರದಲ್ಲಿ ಭೂಮಿ ಕುಸಿದು ಹೋಗಿದ್ದು, ಇದರಿಂದಾಗಿ ಸೋಮಯ್ಯ ಅವರ ಮನೆ ಅಪಾಯದಲ್ಲಿ ಇದೆ. ನಿನ್ನೆ ಸುರಿದ ಮಳೆಯಿಂದ ಉಂಟಾದ ಭೂಕುಸಿತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ ಮಾಡಿದ್ದಾರೆ.

Leave A Reply