ಧ್ವಜಾರೋಹಣ ಹಾಗೂ ಅವರೋಹಣ ಮಾಡುವುದು ಹೀಗೆ ?
ದೇಶದ ಅಸ್ಮಿತೆಯ ಪ್ರತೀಕವಿರುವ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುತ್ತಿರುವಾಗ ಯಾವುದೇ ರೀತಿಯಲ್ಲಿ ಅದರ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಮಾಡಲಾಗಿವೆ
ಹೀಗಾಗಿ, ನಾವು ವಹಿಸಬೇಕಾದ ಎಚ್ಚರಿಕೆ ಇಲ್ಲಿದೆ.
1.ಧ್ವಜದಲ್ಲಿ ಯಾವಾಗಲೂ ಕೇಸರಿ ಬಣ್ಣ ಮೇಲೆ ಬಂದು, ಹಸುರು ಬಣ್ಣ ಕೆಳಗಿರಬೇಕು.
2.ಹರಿದಿರುವ ಧ್ವಜ ಹಾರಿಸುವಂತಿಲ್ಲ.
3.ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿ ಸಮನಾಗಿ ಬೇರೆ ಯಾವುದೇ ಧ್ವಜ ಹಾರಿಸುವಂತಿಲ್ಲ.
4.ಧ್ವಜವನ್ನು ಅಲಂಕಾರಿಕ ವಸ್ತುವಾಗಿ ಬಳಸುವಂತಿಲ್ಲ.
5.ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರುವಂತಿಲ್ಲ.
6.ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ.
7.ಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ.
ಧ್ವಜಾರೋಹಣ ಹೇಗೆ?
ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು. ಧ್ವಜಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.
ಹರಿದರೆ ಏನು ಮಾಡಬೇಕು?
ಒಂದು ವೇಳೆ ಧ್ವಜವು ಹರಿದರೆ, ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು.
ಧ್ವಜ ಮಡಚುವುದು ಹೇಗೆ?
ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾಕಾರಾ ದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ. ಅನಂತರ ಭದ್ರವಾದ ಸ್ಥಳದಲ್ಲಿ ಇರಿಸಿ.