ಉಡುಪಿ:ಭೀಕರ ರಸ್ತೆ ಅಪಘಾತ!! ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಬೈಕ್ ಹಾಗೂ ಟಾಂಕರ್ ನಡುವೆ ನಡೆದ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯಲ್ಲಿ ನಡೆದಿದೆ.

 

ಮೃತ ಸವಾರನನ್ನು ಮಲ್ಲಾರು ನಿವಾಸಿ ಅಲ್ಫಜ್ ಎಂದು ಗುರುತಿಸಲಾಗಿದ್ದು, ಘಟನೆಗೆ ಕಾರಣವಾದ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತ ಸವಾರ ಕಾಪುವಿನಿಂದ ತನ್ನ ಸ್ಕೂಟಿಯಲ್ಲಿ ಉಡುಪಿಯತ್ತ ತೆರಳುತ್ತಿದ್ದ ಸಂದರ್ಭ ಉದ್ಯಾವರ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸವಾರನ ಮೇಲೆಯೇ ಟ್ಯಾಂಕರ್ ಹರಿದಿದ್ದು, ಸ್ಥಳದಲ್ಲೇ ಅಸುನಿಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.

Leave A Reply

Your email address will not be published.