ಪ್ರಧಾನಮಂತ್ರಿ ನರೇಂದ್ರ ಮೋದಿ ಆಸ್ತಿಯಲ್ಲಿ ದಿಢೀರ್ ಹೆಚ್ಚಳ, ಆಸ್ತಿ ಘೋಷಣೆ ವೇಳೆ ವಿಷಯ ಬಹಿರಂಗ !
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸ್ತಿಯಲ್ಲಿ ದಿಢೀರ್ ಹೆಚ್ಚಳ ಕಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭ ಅವರ ಆಸ್ತಿ ಹೆಚ್ಚಳದ ವಿಷ್ಯ ಬಹಿರಂಗ ಆಗಿದೆ. ಮೋದಿ ಅವರ ಚರಾಸ್ತಿ ಹೆಚ್ಚಳವಾಗಿದ್ದು, ಈಗ ಅವರ ಬಳಿ ಒಟ್ಟು 2.23 ಕೋಟಿ ಮೌಲ್ಯದ ಆಸ್ತಿ ಇದೆ. ಆದರೆ ಅವರ ಹೆಸರಿನಲ್ಲಿ ಈಗ ಅಂಗೈ ಅಗಲದ ಜಾಗ ಕೂಡಾ ಇಲ್ಲ !!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2.23 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಕಳೆದೊಂದು ವರ್ಷದಲ್ಲಿ ₹26.13 ಲಕ್ಷದಷ್ಟು ಚರಾಸ್ತಿ ಏರಿಕೆಯಾಗಿದೆ. ಸದ್ಯ ಅವರ ಬಳಿ ₹2.23 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ತಿಳಿದು ಬಂದಿದೆ. ಮೋದಿ ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುಯಲ್ ಫಂಡ್ ಇಂತಹಾ ಯಾವುದೇ ಹೂಡಿಕೆ ಮಾಡಿಲ್ಲ. ಅವರು ಯಾವುದೇ ವಾಹನವನ್ನು ಹೊಂದಿಲ್ಲ. ಆದರೆ ಆಶ್ಚರ್ಯ ಎಂಬಂತೆ ಅವರು 1.73 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಗುಜರಾತ್ ನ ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರಾಸ್ತಿಗಳನ್ನು ಹೊಂದಿಲ್ಲ ಎಂದು ಪಿಎಂಒ ವೆಬ್ ಸೈಟ್ ನಲ್ಲಿ ಆಸ್ತಿಗಳ ಬಗ್ಗೆ ಅವರ ಹೇಳಿಕೆ ಇತ್ತೀಚೆಗೆ ಬಹಿರಂಗಪಡಿಸಿದೆ.
ಅವರು ಯಾವುದೇ ಬಾಂಡ್, ಷೇರುಗಳು ಅಥವಾ ಮ್ಯೂಚುಯಲ್ ಫಂಡ್ ಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ, ಯಾವುದೇ ವಾಹನವನ್ನು ಹೊಂದಿಲ್ಲ, ಆದರೆ ಮಾರ್ಚ್ 31 ರವರೆಗೆ ನವೀಕರಿಸಿದ ಅವರ ಘೋಷಣೆಯ ಪ್ರಕಾರ 1.73 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ಟೋಬರ್ 2002 ರಲ್ಲಿ ಮೋದಿ ಅವರು ವಸತಿ ನಿವೇಶನ ಖರೀದಿಸಿದ್ದರು. ಅದರಲ್ಲಿ ಮೂವರು ಪಾಲುದಾರರಿದ್ದರು. ಸರ್ವೆ ಸಂಖ್ಯೆ 401/ಎ ನಲ್ಲಿ ಇದ್ದ ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಮೋದಿ ಅವರ ಮಾಲೀಕತ್ವ ಇಲ್ಲ ಎಂದು ತಿಳಿಸಲಾಗಿದೆ.
ಮಾರ್ಚ್ 31, 2022 ರ ಹೊತ್ತಿಗೆ ಅವರ ಒಟ್ಟು ಆಸ್ತಿಯ ಒಟ್ಟು ಮೌಲ್ಯ 2,23,82,504 ರೂ ಇದೆ. ಮಾರ್ಚ್ 31, 2022 ರ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿಯವರ ಕೈಯಲ್ಲಿ ₹35,250 ನಗದು, ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೂಲಕ ₹ 9,05,105 ಉಳಿತಾಯ ಹಣವಿದೆ. ವಿಶೇಷ ಏನೆಂದರೆ ಪ್ರಧಾನ ಮಂತ್ರಿ ಒಬ್ಬರ ಹೆಸರಿನಲ್ಲಿ ಇರುವ ಜೀವ ವಿಮೆ ಮೊತ್ತ ಎಷ್ಟು ಗೊತ್ತಾ ? ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಭಾವಿ ನಾಯಕನ ಹೆಸರಿನಲ್ಲಿರುವುದು ಕೇವಲ ಒಂದು ಲಕ್ಷ ಎಂಬತ್ತೊಂಬತ್ತು ಸಾವಿರದ (₹1,89,305) ಮೌಲ್ಯದ ಜೀವ ವಿಮಾ ಪಾಲಿಸಿ ! ಅಷ್ಟೇ ಅಲ್ಲದೆ ಅವರ ಹೆಸರಿನಲ್ಲಿ ಈಗ ಅಂಗೈ ಅಗಲದ ಜಾಗ ಕೂಡಾ ಇಲ್ಲ ! ಈ ಸಿಂಪ್ಲಿಸಿಟಿಗಾಗಿಯೇ ತಾನೇ ಆತನನ್ನು ದೇಶ ವಾಸಿಗಳು ಮತ್ತು ವಿದೇಶ ವಾಸಿಗಳು ಕೂಡಾ ಆತನನ್ನು ನಾಯಕನಾಗಿ ಒಪ್ಪಿಕೊಂಡಿರುವುದು !