ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ : ಮತ್ತೊಂದು ಹೊಸ ಫೀಚರ್ ಅಪ್ಡೇಟ್

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಬಳಕೆದಾರನ ಹಿತದೃಷ್ಟಿಯಿಂದಲೂ ವಾಟ್ಸಪ್ ಕೆಲವೊಂದು ಪ್ರೈವಸಿ ಫೀಚರ್ ಗಳನ್ನು ಅಪ್ಡೇಟ್ ಮಾಡಿದೆ. ಇದೀಗ ಇಂತಹುದೇ ಒಂದು ಹೊಸ ಫೀಚರ್ ಜಾರಿಗೊಳಿಸಿದೆ.

ಹೌದು. ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಮೆಸೇಜ್ ಡಿಲೀಟ್ ಮಾಡುವ ಅವಕಾಶವನ್ನು ನೀಡಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಾಟ್ಸಾಪ್ ಸಂದೇಶ ಹಾಕಿದ್ದು, ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದೆ.

ಈ ಮೊದಲು ಯಾವುದಾದರು ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಅದನ್ನು ಡಿಲೀಟ್ ಮಾಡಲು ಒಂದು ಗಂಟೆ ಎಂಟು ನಿಮಿಷ ಹದಿನಾರು ಸೆಕೆಂಡ್ ಗಳ ಕಾಲ ಮಾತ್ರ ಅವಕಾಶವಿತ್ತು. ಇನ್ನು ಮುಂದೆ ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡಬಹುದಾಗಿದೆ.

ಅಲ್ಲದೆ, ವಾಟ್ಸಾಪ್ ಬಳಕೆದಾರರು ಈಗ ಎಲ್ಲರಿಗೂ ಸೂಚನೆ ನೀಡದೇ ಖಾಸಗಿಯಾಗಿ ಗುಂಪಿನಿಂದ ನಿರ್ಗಮಿಸಲು ಸಾಧ್ಯವಾಗುತ್ತದೆ. ‘ಈಗ, ಹೊರಡುವಾಗ ಪೂರ್ಣ ಗುಂಪಿಗೆ ಸೂಚನೆ ನೀಡುವ ಬದಲು, ಅಡ್ಮಿನ್ʼಗಳಿಗೆ ಮಾತ್ರ ಸೂಚಿಸಲಾಗುತ್ತದೆ. ಈ ವೈಶಿಷ್ಟ್ಯವು ಈ ತಿಂಗಳು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ’ ಎಂದು ಸಾಮಾಜಿಕ ನೆಟ್ವರ್ಕ್ ಹೇಳಿದೆ.

ಅಷ್ಟೇ ಅಲ್ಲದೆ, ನೀವು ಆನ್ಲೈನ್ʼನಲ್ಲಿದ್ದಾಗ ಯಾರು ನೋಡಬಹುದು ಮತ್ತು ಯಾರು ನೋಡಬಾರದು ಎಂದು ಆಯ್ಕೆ ಮಾಡುವ ಸಾಮರ್ಥ್ಯವನ್ನ ವಾಟ್ಸಾಪ್ ಪರಿಚಯಿಸಿದೆ. ನೀವು ಭಯದಲ್ಲಿ, ಕದ್ದುಮುಚ್ಚಿ ಚಾಟ್‌ ಮಾಡುವ ಆಗತ್ಯವಿರೋದಿಲ್ಲ. ಈ ವೈಶಿಷ್ಟ್ಯವು ಈ ತಿಂಗಳು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ವಾಟ್ಸಾಪ್ ರಕ್ಷಣೆಯ ಹೆಚ್ಚುವರಿ ಪದರಕ್ಕಾಗಿ ‘ಒಮ್ಮೆ ವೀಕ್ಷಿಸಿ’ ಸಂದೇಶಗಳಿಗೆ ಸ್ಕ್ರೀನ್ಶಾಟ್ ಬ್ಲಾಕಿಂಗ್ ಸಕ್ರಿಯಗೊಳಿಸುತ್ತಿದೆ. ಈ ವೈಶಿಷ್ಟ್ಯವನ್ನ ಪರೀಕ್ಷಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಬಳಕೆದಾರರಿಗೆ ಪರಿಚಯಿಸಲಾಗುವುದು.

Leave A Reply

Your email address will not be published.