ನಿಮಗೆ ಮದುವೆ ಆಗಿದೆಯಾ ? ಹಾಗಾದರೆ ಸರಕಾರ ನೀಡುತ್ತೆ 72,000 ರೂ. ಹೇಗೆ ಅಂತೀರಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮದುವೆಯಾದವರಿಗೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಮದುವೆಯಾದ ಮಹಿಳೆಯರಿಗೆ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಹೌದು, ವಿವಾಹಿತ ದಂಪತಿಗಳಿಗೆ ಕೇಂದ್ರ ಸರ್ಕಾರದಿಂದ 72,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ, ಎಲ್ಲಾ ವಿವಾಹಿತ ದಂಪತಿಗಳು ತಿಂಗಳಿಗೆ 200 ರೂ. ಠೇವಣಿ ಇಡಬೇಕಾಗುತ್ತೆ. ಹೀಗೆ ಮಾಡಿದರೆ ನಿಮಗೆ 72 ಸಾವಿರ ರೂಪಾಯಿ ದೊರೆಯುತ್ತದೆ.
ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಕೇಂದ್ರ ಸರ್ಕಾರದ ಈ ಯೋಜನೆಯ ಭಾಗವಾಗಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟವಿದ್ದರೆ, ಈ ಯೋಜನೆಯ ಲಾಭ ಪಡೆಯಲು, ನಿಮ್ಮ ವಯಸ್ಸು 18 ರಿಂದ 40 ವರ್ಷದೊಳಗಿರಬೇಕು. ನಿವೃತ್ತಿಯ ನಂತ್ರ ಎಲ್ಲಾ ಹೂಡಿಕೆದಾರರಿಗೆ ಪಿಂಚಣಿ ಮೊತ್ತವನ್ನ ಒದಗಿಸುವುದು.
ಈ ಯೋಜನೆಯಲ್ಲಿ ನೋಂದಾಯಿಸಲು, ನೀವು ಬ್ಯಾಂಕ್ ಖಾತೆ ಅಥವಾ ಜನ್ ಧನ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಇದರಲ್ಲಿ ನೋಂದಣಿ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಯೋಜನೆಯ ಪ್ರಕಾರ, ಮಹಿಳೆಯ ವಯಸ್ಸು 30 ವರ್ಷವಾಗಿದ್ರೆ, ಅವ್ರು ಈ ಯೋಜನೆಯಲ್ಲಿ ತಿಂಗಳಿಗೆ 100 ರೂಪಾಯಿಗಳನ್ನ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಒಂದು ವರ್ಷದಲ್ಲಿ 1200 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಈ ರೀತಿಯಾಗಿ, 60ನೇ ವಯಸ್ಸಿಗೆ, ನಿಮ್ಮ ಒಟ್ಟು ಮೊತ್ತ 36 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ಠೇವಣಿ ಮಾಡಲಾಗುತ್ತದೆ.
ಇದರ ಆಧಾರದ ಮೇಲೆ, ನೀವು ಪ್ರತಿ ತಿಂಗಳು 3000 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತೀರಿ. ಒಂದ್ವೇಳೆ ಠೇವಣಿಯಿಟ್ಟ ಸಾವನ್ನಪ್ಪಿದರೇ, ನಾಮಿನಿ ಸಂಗಾತಿಗೆ ಪ್ರತಿ ತಿಂಗಳು ಅರ್ಧದಷ್ಟು ಅಂದ್ರೆ 1500 ರೂಪಾಯಿಗಳನ್ನು ನೀಡಲಾಗುತ್ತೆ. ಪತಿ-ಪತ್ನಿ ಇಬ್ಬರೂ ಇದರ ಭಾಗವಾದರೆ, ಈ ರೀತಿಯಲ್ಲಿ ಇಬ್ಬರಿಗೂ ತಿಂಗಳಿಗೆ ಒಟ್ಟು 6,000 ರೂಪಾಯಿ ಪಿಂಚಣಿ ಸಿಗುತ್ತದೆ. ಇದರರ್ಥ ನೀವು ನಿಮ್ಮ ಹೆಂಡತಿಯೊಂದಿಗೆ ವರ್ಷಕ್ಕೆ 72,000 ರೂ.ಗಳನ್ನು ಪಡೆಯಲು ಅರ್ಹರಾಗುತ್ತೀರಿ.
ಈ ಯೋಜನೆಯಡಿ ಹೂಡಿಕೆದಾರರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದು. ಇದರಿಂದ ಹೆಚ್ಚು ಹೆಚ್ಚು ಜನರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಟೈರ್ ಒನ್ ಮತ್ತು ಟೈರ್ ಟು ಎಂದು ಎರಡು ರೀತಿಯ ಖಾತೆಗಳಿವೆ.
ರಾಷ್ಟ್ರೀಯ ಪಿಂಚಣಿ ಯೋಜನೆಯ ಮೂಲಕ, ಎಲ್ಲಾ ನಾಗರಿಕರು ನಿವೃತ್ತಿಯ ನಂತರ ಸ್ವಾವಲಂಬಿಗಳಾಗಬಹುದು ಮತ್ತು ಆರ್ಥಿಕ ಸಮಸ್ಯೆ ಬರಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಿವೃತ್ತಿಯ ನಂತರವೂ ನೀವು ಆರ್ಥಿಕವಾಗಿ ಸ್ವತಂತ್ರರಾಗಿರುತ್ತೀರಿ.