ಪುರುಷರಲ್ಲಿ “ಬಿಳಿ” ಹೋಗುವುದರ ಬಗ್ಗೆ ನಿಮಗೆ ಗೊತ್ತೇ? ಯಾಕಾಗಿ ಈ ರೀತಿಯಾಗುತ್ತೆ? ಇದರ ಫುಲ್ ಡಿಟೇಲ್ಸ್ ಇಲ್ಲಿದೆ !

ಯಾರೇ ಆಗಲಿ ಆರೋಗ್ಯವಂತ ಮನುಷ್ಯರಲ್ಲಿ ಏನೇ ತೊಂದರೆ ಉಂಟಾದರೆ ತುಂಬಾ ಹೆದರಿಕೆ ಆಗುತ್ತದೆ. ಕೆಲವರಿಗೆ ಒಮ್ಮೆಲೇ ಖಿನ್ನತೆಯಾಗುತ್ತದೆ. ಲೈಂಗಿಕ ಸಮಸ್ಯೆ ವಿಷಯ ಬಂದರಂತೂ ಹೇಳುವುದೇ ಬೇಡ. ಇವತ್ತು ನಾವು ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ‌.

 

ಪುರುಷರ ಲೈಂಗಿಕ ಆರೋಗ್ಯ ಚೆನ್ನಾಗಿರಬೇಕು ಎಂದರೆ ಪುರುಷರ ಶಿಶ್ನದ ಭಾಗ ಮತ್ತು ಋಷಣಗಳ ಭಾಗ ಆರೋಗ್ಯದಿಂದಿರಬೇಕು. ಅವುಗಳ ಆರೋಗ್ಯ ಹದಗೆಟ್ಟರೆ, ಮೂತ್ರ ವಿಸರ್ಜನೆ ಮಾಡುವಾಗ, ಕೀವು, ರಕ್ತ ಬರುತ್ತದೆ. ಹೆದರಿಕೆ ಆಗುತ್ತದೆ ಅಲ್ಲವೇ? ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರುವ ಹಲವಾರು ಪುರುಷರು ನಮ್ಮ ಮಧ್ಯೆ ಇರುತ್ತಾರೆ. ಈ ತೊಂದರೆಯ ಬಗ್ಗೆ ತಿಳಿದುಕೊಳ್ಳೋಣ.

ಪುರುಷರ ವೃಷಣಗಳ ಭಾಗದಿಂದ ನಾಳಗಳ ಮೂಲಕ ಹೊರಬರುವ ಬಿಳಿ ಶಿಶ್ನದ ಮೂಲಕ ನೀರಿನ ರೀತಿ ಅಥವಾ ಕೀವು ತರಹ ಅಥವಾ ಕೆಲವೊಮ್ಮೆ ರಕ್ತ ಕೂಡ ಬರುವಾಗ, ಆ ಭಾಗದಲ್ಲಿ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಇದು ಕಾಣಿಸುತ್ತದೆ. ಈ ರೀತಿಯ ಬಿಳಿ ಹೊರ ಹೋಗುವ ಸಂದರ್ಭದಲ್ಲಿ ಶಿಶ್ನದ ಭಾಗದಲ್ಲಿ ಕೆಲವರಿಗೆ ಕೆರೆತ ಇರುತ್ತದೆ. ಇದನ್ನು ಲೈಂಗಿಕವಾಗಿ ವರ್ಗಾವಣೆಯಾಗುವ ಸೋಂಕು ಎನ್ನಬಹುದು. ಸರಿಯಾದ ಚಿಕಿತ್ಸೆ ಮೂಲಕ ಇದನ್ನು ನಿವಾರಿಸಬಹುದು.

ಯಾವುದೇ ಆರೋಗ್ಯ ಸಮಸ್ಯೆ ಆದರೂ ಅದು ಗಂಭೀರ ಸಮಸ್ಯೆನೇ. ಹಾಗೆನೇ ಶಿಶ್ನದ ಭಾಗದಿಂದ ಪುರುಷರಿಗೆ ಬಿಳಿ ಹೋಗುವುದು ಸ್ವಲ್ಪ ಗಂಭೀರವಾಗಿ ತೆಗೆದು ಕೊಳ್ಳಬೇಕಾದ ವಿಷಯ. ಇದಕ್ಕೆ ಕಾರಣವನ್ನು ಮೊದಲು ಕಂಡು ಹಿಡಿದುಕೊಳ್ಳಬೇಕು. ವೈದ್ಯರ ಪ್ರಕಾರ ಕಾರಣಗಳು ಈ ರೀತಿ ಇರುತ್ತವೆ. ಅವು ಯಾವುದು? ಇಲ್ಲಿದೆ.

ಐವತ್ತು ವರ್ಷದ ಒಳಗಿನ ಪುರುಷರಲ್ಲಿ ಅದರಲ್ಲೂ ಎಲ್ಲರಲ್ಲಿ ಅಲ್ಲ, ಕೆಲವರಲ್ಲಿ ಮಾತ್ರ ಈ ರೀತಿ ಕಂಡು ಬರುವ ಸಾಧ್ಯತೆ ಇರುತ್ತದೆ. ವಯಸ್ಸಾದಂತೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಪುರುಷರ ಋಷಣಗಳ ತುದಿಯ ಭಾಗ ಇದ್ದಕ್ಕಿದ್ದಂತೆ ಊದಿಕೊಂಡರೆ, ಇದು ಈ ರೋಗದ ಮುಖ್ಯವಾದ ಲಕ್ಷಣ. ಈಸ್ಟ್ ಸೋಂಕು ಕಾರಣ ಎಂದು ವೈದ್ಯರು ಇದಕ್ಕೆ ಹೇಳುತ್ತಾರೆ. ಇಲ್ಲಿ ಶಿಶ್ನದ ಭಾಗದಿಂದ ಬಿಳಿ ಹೊರಹೋಗುತ್ತದೆ. ಪುರುಷರ ಶಿಶ್ನದ ಮೂಲಕ ಬಿಳಿ ಹೋಗುವ ಮತ್ತೊಂದು ಕಾರಣ ಎಂದರೆ ಅದು ಪ್ರಾಸ್ಟೇಟ್ ಗ್ರಂಥಿಯ ತೊಂದರೆ, ಯಾವಾಗ ಇದು ಬ್ಯಾಕ್ಟಿರಿಯಾದ ಸೋಂಕಿಗೆ ಒಳಗಾಗುತ್ತದೆ ಆಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸಹ ಶಿಶ್ನದ ಭಾಗದಲ್ಲಿ ನೋವು ಮತ್ತು ಉರಿ ಕಂಡು ಬರುತ್ತದೆ. ಕೆಲವರಿಗೆ ಇದು ಸ್ವಲ್ಪ ಸಮಯದವರೆಗೆ ಕಂಡು ಬಂದರೆ, ಪರಿಹಾರವಾದರೆ ಇನ್ನು ಕೆಲವರಿಗೆ ದೀರ್ಘ ಕಾಲ ಇರುತ್ತದೆ.

ಸುರಕ್ಷತೆ ಇಲ್ಲದ ಲೈಂಗಿಕ ಸಂಪರ್ಕ ಮಾಡಿದರೂ ಇಂತಹ ಸೋಂಕು ಪುರುಷರಿಗೆ ಹರಡಿ ಅದರಿಂದಲೂ ಈ ರೀತಿಯ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಪುರುಷರು ಅನುಭವಿಸಬಹುದಾದ ಅತ್ಯಂತ ಕೆಟ್ಟ ಆರೋಗ್ಯ ಪರಿಸ್ಥಿತಿ ಇದು. ಸರಿಯಾದ ಸಮಯಕ್ಕೆ ಟ್ರೇಟ್ಮೆಂಟ್ ತೆಗೆದುಕೊಳ್ಳದೇ ಹೋದರೆ ಈ ತೊಂದರೆ ತಪ್ಪಿದ್ದಲ್ಲ.

ಹಾಗಾಗಿ ಪುರುಷರು ಈ ಕೆಳಗಿನ ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಈ ಎಲ್ಲಾ ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದು. ಅವುಗಳು ಯಾವುದೆಂದರೆ ;

ನಿಮ್ಮ ಸಂಗಾತಿಯ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ಸುರಕ್ಷತೆಯಿಂದ ಲೈಂಗಿಕತೆ ಮಾಡಲು ಮರೆಯಬೇಡಿ. ಶಿಶ್ನದ ಭಾಗದಲ್ಲಿ ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ನೋವು ಬಂದರೆ ಕೂಡಲೇ ವೈದ್ಯರಲ್ಲಿ ತೋರಿಸಿ. ಉತ್ತಮವಾದ ಆರೋಗ್ಯಕರವಾದ ಆಹಾರ ಪದಾರ್ಥ ಸೇವಿಸಿ. ನಿಮ್ಮ ಲೈಂಗಿಕ ಅಂಗಾಂಗಗಳನ್ನು ಸ್ವಚ್ಛ ಪಡಿಸಿಕೊಳ್ಳಿ. ಈ ರೀತಿಯ ತೊಂದರೆಗಳು ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಹತ್ತಿರ ಭೇಟಿ ಕೊಡಿ.

Leave A Reply

Your email address will not be published.