ಮರುಬಳಕೆಯ ಪ್ಲಾಸ್ಟಿಕ್ ನಿಂದ ನಿರ್ಮಾಣವಾಗಿದೆ ರಸ್ತೆ!

ಪರಿಸರ ಬಳಕೆ ನಿಷೇಧ ಬೆನ್ನಲ್ಲೇ ಮರುಬಳಕೆಯ ಪ್ಲಾಸ್ಟಿಕ್ ನಿಂದ ರಸ್ತೆ ನಿರ್ಮಾಣವಾಗಿದೆ. ಪರಿಸರ ಸ್ನೇಹಿಯಾಗಿರುವ ಈ ರಸ್ತೆ ಬೆಂಗಳೂರಿನಲ್ಲಿ ಸಿದ್ಧವಾಗಿದ್ದು, ಇದು ಡಾಂಬರು, ಕಾಂಕ್ರಿಟ್ ರಸ್ತೆಗಳ ಗುಣಮಟ್ಟವನ್ನೂ ಮೀರಿಸುತ್ತದೆ.

 

ಕಳೆದ ತಿಂಗಳ ಆರಂಭದಲ್ಲಿ, ನೂರಕ್ಕೆ ನೂರರಷ್ಟು ಪ್ಲಾಸ್ಟಿಕ್ ಅನ್ನೇ ಬಳಸಿ ನಿರ್ಮಿಸಲಾದ ಈ ರಸ್ತೆಯನ್ನು ಪಾಟ್‌ಹೋಲ್‌ರಾಜಾ, ಗ್ರಿಡ್‌ಮ್ಯಾಟ್ಸ್‌ ಎಂದು ಕರೆಯಲಾಗುತ್ತಿದೆ. ಇದು ಪೇಟೆಂಟ್ ಪಡೆದ ಉತ್ಪನ್ನವಾಗಿದ್ದು, ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಾಳಿಕೆ ಬರುವ, ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಅನುಕೂಲವಾಗಿದೆ ಎಂದು ಕಂಪನಿಯು ಹೇಳಿದೆ.

ಬಿಬಿಎಂಪಿ ಹಾಗೂ ಸಾಮಾಜಿಕ ಉದ್ಯಮ ಪಾಟ್‌ಹೋಲ್‌ರಾಜಾ ಮತ್ತು ಓಆರ್‌ಆರ್ ಕಂಪನಿಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಆರ್‌ಎಂಜೆಡ್ ಇಕೋವರ್ಲ್ಡ್ ಮತ್ತು ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಹೊಸ ಕಾಂಕ್ರಿಟ್ ರಸ್ತೆಯನ್ನು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ.

“ಈ ರಸ್ತೆಯನ್ನು ನಿರ್ಮಿಸಲು 3,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗಿದೆ ಎಂದು ಪಾಟ್‌ಹೋಲ್ ರಾಜಾ ಪ್ರಕಟಣೆ ಹೇಳಿದೆ. ಈ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಮಾನ್ಯ ಕಾಂಕ್ರಿಟ್ ರಸ್ತೆಗಳಿಗೆ ಬಳಕೆಯಾಗುವ ನೀರಿನ ಪ್ರಮಾಣಕ್ಕಿಂತ ಶೇ.30ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಇದಕ್ಕೆ ಉಕ್ಕಿನ ಬಲವರ್ಧಕ ಕೂಡಾ ಅಗತ್ಯವಿಲ್ಲ” ಎಂದು ಪಾಟ್‌ಹೋಲ್ ನಿರ್ದೇಶಕ ಸೌರಭ್ ಕುಮಾರ್ ಹೇಳಿದ್ದಾರೆ.

ಅಲ್ಲದೆ, ಸಾಂಪ್ರದಾಯಿಕ ಕಾಂಕ್ರಿಟ್ ತಂತ್ರಜ್ಞಾನದಲ್ಲಿ ಈ ನಿರ್ಮಾಣ ಕಾಮಗಾರಿಯಿಂದ 46.5 ಟನ್ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರೆ ಗ್ರಿಡ್‌ಮ್ಯಾಟ್ಸ್ ಪ್ರಕ್ರಿಯೆಯಲ್ಲಿ ಕೇವಲ 11.9 ಟನ್ ಬಿಡುಗಡೆಯಾಗುತ್ತದೆ. ಅಂದರೆ ಸುಮಾರು 34.6 ಟನ್ ಕಡಿಮೆ ಇಂಗಾಲದ ಡೈಆಕ್ಸೈಡ್‌ ಹೊರ ಸೂಸಲ್ಪಡುತ್ತದೆ. ಇದು 1,36,800 ಕಿಮೀ. ಕಾರು ಚಲಾಯಿಸಿದಾಗ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣಕ್ಕೆ ಸಮ ಎಂದು ಅವರು ವಿವರಿಸಿದ್ದಾರೆ.

“ಪ್ರಸ್ತುತ, ಮಾರತ್ತಹಳ್ಳಿ ಕಡೆಗೆ ಹೋಗಲು ಇಕೋವರ್ಲ್ಡ್‌ನಿಂದ ನಿರ್ಗಮಿಸುವ ಪ್ರಯಾಣಿಕರು ಬೆಳ್ಳಂದೂರಿನಲ್ಲಿ ತುಂಬಾ ದೂರದ ಯು-ಟರ್ನ್ ಅನ್ನು ತೆಗೆದುಕೊಳ್ಳಬೇಕು ಮತ್ತು ಹೊರ ವರ್ತುಲ ರಸ್ತೆಯಿಂದ ಇಕೋವರ್ಲ್ಡ್ ಮತ್ತು ಅದರ ಸಮೀಪಕ್ಕೆ ಹೋಗುವವರು ಕೂಡ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆಯಿಂದ ಸಾಕಷ್ಟು ತೊಂದರೆಯನ್ನು ಎದುರಿಸುತ್ತಾರೆ. ಜನ ದಟ್ಟಣೆಯ ಜಂಕ್ಷನ್‌ನಲ್ಲಿ ಪ್ರಯಾಣಿಕರು ಯು-ಟರ್ನ್ ತೆಗೆದುಕೊಳ್ಳಬೇಕಾಗಿರುವುದರಿಂದ ಭಾರೀ ಜನ ದಟ್ಟಣೆ ಪ್ರಾರಂಭವಾಗುತ್ತದೆ. ಆದ್ದರಿಂದ ಈಗ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಪರ್ಕ ರಸ್ತೆಯು ಪ್ರಯಾಣದ ಸಮಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿತಗೊಳಿಸುತ್ತದೆ”ಎಂದು ಪಾಟ್‌ಹೋಲ್‌ರಾಜ ನಿರ್ದೇಶಕ ಸೌರಭ್ ಕುಮಾರ್ ದಿ ಬೆಟರ್ ಹೇಳಿದರು.

ಈ ಮರು ಬಳಕೆ ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣವು ಕೆನಡಾ ಮೂಲದ ವಾಸ್ತುಶಿಲ್ಪ, ಎಂಜಿನಿಯರಿಂಗ್, ಯೋಜನೆ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಐಬಿಐ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಭಾಗಿತ್ವದಲ್ಲಿ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ನೇತೃತ್ವದ ಪ್ರದೇಶಕ್ಕೆ ದೊಡ್ಡ ಮೂಲಸೌಕರ್ಯ ನವೀಕರಣ ಯೋಜನೆಯ ಭಾಗವಾಗಿದೆ.

Leave A Reply

Your email address will not be published.