ಮತ್ತೆ ಕಂಪಿಸಿದ ಭೂಮಿ | ಭಯಭೀತರಾಗಿ ಹೊರಬಂದ ಜನ
ನೇಪಾಳದ ಬಾಗ್ಮತಿ ಪ್ರಾಂತ್ಯದ ನುವಾಕೋಟ್ ಜಿಲ್ಲೆಯ ಬೆಲ್ನೋಟ್‌ಗಡಿಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (ಎನ್‌ಇಎಂಆರ್‌ಸಿ) ಶನಿವಾರ ತಿಳಿಸಿದೆ.
ಮುಂಜಾನೆ 5:26ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದೆ. ನುವಾಕೋಟ್ ಜಿಲ್ಲೆಯ ಬೆಲ್ಕೋಟ್ ಗಡಿ ಸುತ್ತಮುತ್ತ 05:26 ಕ್ಕೆ 5.3 ರ ಭೂಕಂಪ ಸಂಭವಿಸಿದೆ. ಎಂದು ಎನ್‌ಇಎಂಆರ್‌ಸಿ ಟ್ವೀಟ್‌ನಲ್ಲಿ ಹೇಳಿದೆ.
ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲಿ.ಆದರೆ ಭೂಮಿ ಕಂಪನದಿಂದ ಜನರು ಹೆದರಿ ಮನೆಗಳಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.