ಬಿಜೆಪಿ ಕಾರ್ಯಕರ್ತರನ್ನು ದೊಣ್ಣೆಯಿಂದ ಥಳಿಸಿದ ಶಾಸಕ| ವೀಡಿಯೋ ವೈರಲ್
ಮೆರವಣಿಗೆಯಲ್ಲಿ ಕೂಗಿದ ಘೋಷಣೆಗಳಿಂದ ಕ್ರೋಧಗೊಂಡ ಟಿಎಂಸಿ ಶಾಸಕ ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಮೆರವಣಿಗೆ ರ್ಯಾಲಿಯ ಮೇಲೆ ಟಿಎಂಸಿ ಶಾಸಕ, ಕಾರ್ಯಕರ್ತರು ದಾಳಿ ಮಾಡಿ ಕೋಲಿನಿಂದ ಥಳಿಸಿದ ಘಟನೆ ನಡೆದಿದೆ.
ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಮಧ್ಯೆ ಕಾದಾಟ ಆಗಿದ್ದು, ಬಿಜೆಪಿ ಮೆರವಣಿಗೆ ರ್ಯಾಲಿಯ ಮೇಲೆ ಟಿಎಂಸಿ ಶಾಸಕ, ಕಾರ್ಯಕರ್ತರು ದಾಳಿ ಮಾಡಿ ಕೋಲಿನಿಂದ ಥಳಿಸಿದ ಘಟನೆಯೊಂದು ನಡೆದಿದೆ
ತೃಣಮೂಲ ಕಾಂಗ್ರೆಸ್ ಶಾಸಕ ಅಸಿತ್ ಮುಜುಂದಾರ್ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ಪ್ರೇರೇಪಣೆ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನಾ ರಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಕಾದಾಟ ನಡೆದಿದೆ. ಪ್ರತಿಭಟನಾ ರ್ಯಾಲಿ ಟಿಎಂಸಿ ಕಚೇರಿ ಮುಂದೆ ಹೋಗುತ್ತಿದ್ದಾಗ, ಅಲ್ಲಿಯೇ ಇದ್ದ ಶಾಸಕ ಅಸಿತ್ ಮುಜುಂದಾರ್ ಮತ್ತು ಅವರ ಕಾರ್ಯಕರ್ತರು ಬಿಜೆಪಿ ವಾಹನದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಕಾರ್ಯಕರ್ತರಿಗೆ ಬಿಜೆಪಿ ಸಹವರ್ತಿಗಳನ್ನು ಥಳಿಸುವಂತೆ ಅಸಿತ್ ಮುಜುಂದಾರ್ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿಗರ ಮೇಲೆ ಮುಗಿಬಿದ್ದಿದ್ದಾರೆ. ಮಹಿಳೆಯರು ಕೂಡಾ ಬಿಜೆಪಿಗರ ಕೊರಳುಪಟ್ಟಿ ಹಿಡಿದು ಹೊಡೆದಿದ್ದಾರೆ. ಬಿಜೆಪಿಗರು ಬಾವುಟ ಅಳವಡಿಸಿದ್ದ ಕೋಲನ್ನೇ ಕಿತ್ತುಕೊಂಡ ಟಿಎಂಸಿ ಶಾಸಕ ಅಸಿತ್ ಮುಜುಂದಾರ್ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಟಿಎಂಸಿ ಕಾರ್ಯಕರ್ತರ ದಾಳಿಯಿಂದಾಗಿ
ಬಿಜೆಪಿಗರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ.
ಬಿಜೆಪಿಗರ ಮೇಲೆ ನಡೆದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಟಿಎಂಸಿ ಶಾಸಕ ಅಸಿತ್ ಮಜುಂದಾರ್, ತಮ್ಮ ಕಾರನ್ನು ತಡೆದ ಬಿಜೆಪಿಗರು ನನ್ನ ಹತ್ಯೆಗೆ ಯತ್ನಿಸಿದ್ದರು. ಶಾಸಕಾಂಗ ಸಭೆಯ ಸಭೆ ಮುಗಿಸಿ ವಾಪಸ್ ಆಗುವಾಗ ಕಾರು ತಡೆದು ಕಿರುಕುಳ ನೀಡಿದರು. ಹೀಗಾಗಿ ಗಲಾಟೆ ನಡೆಯಿತು ಎಂಬ ಹೇಳಿಕೆ ನೀಡಿದ್ದಾರೆ.