ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ತುರ್ತು ಸೇವಾ ವಾಹನ!! ಶೀಘ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್’

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ಅಂದು ತುರ್ತು ಆಂಬುಲೆನ್ಸ್ ಇರುತ್ತಿದ್ದರೆ ಉಳಿದುಬಿಡುತ್ತಿದ್ದರು, ಅವರನ್ನು ಕಳೆದುಕೊಂಡ ನೋವು ಪ್ರತಿಯೊಬ್ಬರಿಗೂ ಕಾಡುತ್ತಿದೆ. ಮುಂದೆ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಪ್ಪು ಹೆಸರಲ್ಲಿ ತುರ್ತು ಆಂಬುಲೆನ್ಸ್ ಸೇವೆ ಆರಂಭಿಸಲಿದ್ದೇವೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

 

ತಮ್ಮ ಫೌಂಡೇಶನ್ ವತಿಯಿಂದ ಬೆಂಗಳೂರು ನಗರದಲ್ಲಿ ಅಪ್ಪು ಎಕ್ಸ್ ಪ್ರೆಸ್ ತುರ್ತು ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡುತ್ತಿದೆ, ಅವರಿರುತ್ತಿದ್ದರೆ ರಾಜ್ಯಕ್ಕೆ ಇನ್ನಷ್ಟು ಉತ್ತಮ ಕೆಲಸಗಳು ಆಗುವುದಿತ್ತು ಎಂದರು.

ಸದ್ಯ ಬೆಂಗಳೂರಿನ ತುರ್ತು ಸೇವೆಗೆ ಮಾತ್ರ ಚಾಲನೆ ನೀಡಿದ್ದು,ಕ್ರಮೇಣ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಪ್ಪು ತುರ್ತು ಸೇವೆ ವಾಹನ ನೀಡಲಿದ್ದೇವೆ, ಎಲ್ಲಾ ಜಿಲ್ಲೆಗಳಲ್ಲೂ ಅಪ್ಪು ಆಂಬುಲೆನ್ಸ್ ಸೇವೆಗೆ ಬರಲಿದೆ ಎಂದು ಹೇಳಿದರು.

Leave A Reply

Your email address will not be published.