ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಹೆತ್ತ ತಾಯಿ ಅತ್ಯಾಚಾರಿಗಳನ್ನು ಕಂಡು ಹಿಡಿದು, ನ್ಯಾಯ ದೊರಕಿಸಿ ಕೊಟ್ಟ ಮಗ!!!
ಯಾವುದೇ ಹೆಣ್ಣಾಗಲಿ ಅತ್ಯಾಚಾರಕ್ಕೆ ಒಳಗಾದಾಗ ಆ ಕೆಟ್ಟ ಕಹಿಘಳಿಗೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆದರೆ ಆ ಅತ್ಯಾಚಾರದಿಂದ ಹುಟ್ಟಿದ ಮಗನೇ ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಹೆತ್ತ ತಾಯಿಗೆ ನ್ಯಾಯ ಒದಗಿಸಿದ್ದಾನೆ ಎಂದರೆ ನಂಬುತ್ತೀರಾ ? ನಂಬಲೇ ಬೇಕು. ಇದು ನ್ಯಾಯಕ್ಕಾಗಿ ಹೋರಾಟ ಮಾಡಿದ ಮಗನ ಕಥೆ. ತನ್ನ ತಾಯಿಗೆ ನ್ಯಾಯ ಸಲ್ಲಿಸಿದ ಘಟನೆ. ಹೌದು. ಬನ್ನಿ ಏನಿದು ಕುತೂಹಲಕಾರಿ ಘಟನೆ ತಿಳಿಯೋಣ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ.
ಓರ್ವ ಬಾಲಕಿ ತನ್ನ 12ನೇ ವಯಸ್ಸಿನಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಷಹಜಹಾನ್ಪುರದಲ್ಲಿ ವಾಸಿಸುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಕಾಮಾಂಧ ಸಹೋದರರಿಬ್ಬರು ಅತ್ಯಾಚಾರವೆಸಗಿದ್ದಾರೆ. ಈ ಘಟನೆಯಿಂದ ನಲುಗಿದ ಆ ಬಾಲೆ, ನಂತರ ಗರ್ಭಿಣಿಯಾಗಿ, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಆ ಬಾಲಕಿಯ ಕುಟುಂಬವು 9 ತಿಂಗಳ ಬಳಿಕ ಜನಿಸಿದ ಮಗುವನ್ನು ಅನಾಥಾಶ್ರಮದ ಸುಪರ್ದಿಗೆ ನೀಡಿತ್ತು. ಅಕ್ಷರಶಃ ನಲುಗಿ ಹೋಗಿದ್ದ ಆ ಬಾಲಕಿಯ ಕುಟುಂಬ ಆರೋಪಿಗಳ ಬೆದರಿಕೆಗೆ ಹೆದರಿ ದೂರು ನೀಡಿರಲಿಲ್ಲ.
ಅನಾಥಾಶ್ರಮದಲ್ಲಿ ಬೆಳೆದ ಮಗ ದೊಡ್ಡವನಾಗಿ ತನ್ನ ತಾಯಿಯ ಹುಡುಕಾಟ ನಡೆಸಿದ. ಆತನ ಒತ್ತಾಯದ ಮೇರೆಗೆ ಶಹಜಹಾನ್ಪುರದ ಸಂತ್ರಸ್ತೆ ಮನೆಗೆ ಕರೆದೊಯ್ಯಲಾಯಿತು. ತಾಯಿಯನ್ನು ಭೇಟಿಯಾದ ನಂತರ, ಅವನು ತನ್ನ ತಂದೆಯ ಬಗ್ಗೆ ಕೇಳಿದ್ದು, ತಂದೆಯ ಗುರುತು ಕೇಳಿ, ತಾಯಿಯನ್ನು ಒತ್ತಾಯಿಸಿದ್ದಾನೆ.
ಅನಂತರ ತಾಯಿಯ ಮೇಲಾದ ಕ್ರೌರ್ಯದ ವಿರುದ್ಧ 2021 ರ ಮಾರ್ಚ್ 4 ರಂದು ದೂರು ನೀಡುತ್ತಾನೆ. ಅದರಂತೆ ಎಫ್ ಐಆರ್ ದಾಖಲು ಮಾಡಲಾಗಿದೆ.
ಅಪರಾಧಿಗಳ ಪತ್ತೆಗೆ ಇಳಿದ ಪೊಲೀಸರು, ಡಿಎನ್ ಎ ಪರೀಕ್ಷೆಯೊಂದೇ ಪರಿಹಾರ ಎಂದು ನಿರ್ಧಾರ ಮಾಡುತ್ತಾರೆ. ಅದರಂತೆ ನೂರಾರು ಪರೀಕ್ಷೆಗಳ ಬಳಿಕ ರಾಜಿ ಮತ್ತು ಹಸನ್ ಸೋದರರ ಪೈಕಿ ರಾಜಿ ಎಂಬಾತ ಕುಖ್ಯಾತನ ಡಿಎನ್ ಎ “ಮ್ಯಾಚ್” ಆಯಿತು. ಕೊನೆಗೂ ತಾಯಿಗೆ ನ್ಯಾಯ ದೊರಕಿಸಿಕೊಟ್ಟ ಖುಷಿಯಲ್ಲಿ ಮಗನಿದ್ದಾನೆ.