ಹಾವಿನ ಮೂಲಕ ಬೆನ್ನು ಬಿದ್ದ ದುರಾದೃಷ್ಟ ; ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ ಕುಟುಕಿ ಕೊಂದ ಉರಗ !

Share the Article

ಕೆಲವೊಬ್ಬರ ಹಣೆ ಬರಹ ಎಷ್ಟು ದುರದೃಷ್ಟಕರವಾಗಿರುತ್ತೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಯಾಕಂದ್ರೆ ಈ ಘಟನೆಲೀ ಸಹೋದರರಿಬ್ಬರಿಗೆ ಹಾವೇ ದುರಾದೃಷ್ಟವಾಗಿ ಬೆನ್ನು ಬಿದ್ದಿದೆ.

ಹೌದು. ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ, ಉರಗ ಕುಟುಕಿ ಕೊಂದ ಆಶ್ಚರ್ಯಕರ ಘಟನೆ ನಡೆದಿದೆ. ಒಟ್ಟಾರೆ, ಇವರಿಬ್ಬರ ಹಣೆಬರಹದಲ್ಲಿ ಹಾವಿನಿಂದಲೇ ಸಾವು ಎಂದು ಬರೆದಿತ್ತೋ ಏನೂ..ಇಂತಹ ಒಂದು ಘಟನೆ ಉತ್ತರ ಪ್ರದೇಶದ ಬಲರಾಮಪುರದಲ್ಲಿ ಗುರುವಾರ ನಡೆದಿದೆ.

ಹಾವು ಕಡಿತದಿಂದ ಮೃತಪಟ್ಟ ಅಣ್ಣ ಅರವಿಂದ್ ಮಿಶ್ರಾ (38) ಅಂತ್ಯಕ್ರಿಯೆಗೆಂದು ಗೋವಿಂದ ಮಿಶ್ರಾ (22) ಎಂಬಾತ ಬುಧವಾರ ಭವಾನಿಪುರಕ್ಕೆ ಬಂದಿದ್ದ. ಬಳಿಕ ವಿಧಿವಿಧಾನಗಳನ್ನು ಮುಗಿಸಿ ರಾತ್ರಿ ಮನೆಯಲ್ಲಿ ಹಾಯಾಗಿ ಮಲಗಿರುವಾಗ ಆತನಿಗೂ ಹಾವು ಕಚ್ಚಿ ಮೃತಪಟ್ಟಿದ್ದಾನೆ.

ಅಷ್ಟೇ ಅಲ್ಲದೆ, ಗೋವಿಂದನ ಜೊತೆಯಲ್ಲಿ ಸಂಬಂಧಿ ಚಂದ್ರಶೇಖರ್ ಪಾಂಡೆ (22) ಮಲಗಿದ್ದು, ಆತನಿಗೂ ಹಾವು ಕಚ್ಚಿದೆ. ಆತನ ಸ್ಥಿತಿ ಗಂಭೀರವಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋವಿಂದ ಮಿಶ್ರಾ ಮತ್ತು ಚಂದ್ರಶೇಖರ್ ಪಾಂಡೆ ಇಬ್ಬರೂ ಅರವಿಂದ ಮಿಶ್ರಾ ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಲುಧಿಯಾನದಿಂದ ಗ್ರಾಮಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ವೈದ್ಯಕೀಯ ಮತ್ತು ಆಡಳಿತ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದರು. ಸ್ಥಳೀಯ ಶಾಸಕ ಕೈಲಾಶ್ ನಾಥ್ ಶುಕ್ಲಾ ಅವರು ದುಃಖತಪ್ತ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಮೊದಲೇ ದುಃಖದಲ್ಲಿದ್ದ ಕುಟುಂಬಕ್ಕೆ ಇನ್ನೊಬ್ಬನ ಸಾವಿನಿಂದ ಮತ್ತಷ್ಟು ನೋವು ಹೆಚ್ಚಾಗಿದೆ. ಒಟ್ಟಾರೆ, ಈ ಸಹೋದರರಿಗೆ ಹಾವಿನ ಮೂಲಕ ದುರದೃಷ್ಟ ಬೆನ್ನು ಹತ್ತಿದ್ದು ಮಾತ್ರ ಸುಳ್ಳಲ್ಲ..

Leave A Reply