ರಾಜ್ಯ ರಾಜಧಾನಿಯಲ್ಲಿ 1.33 ಕೋಟಿ ರೂ. ಮೌಲ್ಯದ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ !!!

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬಯಲಿಗೆ ಬಂದಿದೆ. ಈ ನಕಲಿ ಛಾಪಾ ಕಾಗದ ಹಗರಣ ಸಂಬಂಧ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಗರಣ ಸಂಬಂಧ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸಿಸಿಬಿ ಪೊಲೀಸರು ಒಡೆಯರ ಕಾಲದ ಛಾಪಾ ಕಾಗದಗಳು ಸೇರಿದಂತೆ ಒಟ್ಟು 1.33 ಕೋಟಿ ರೂ. ಮೌಲ್ಯದ 2664 ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ.

ಛಾಪಾ ಕಾಗದದ ಮೂಲಕ ಆರೋಪಿಗಳು ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದರು. ನಾಲ್ಕು ಕಡೆ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 1990,1995, 2002, 2009 ರಲ್ಲಿ ರಿಜಿಸ್ಟರ್ ಆಗಿರುವಂತೆ ದಾಖಲಾತಿ ಸೃಷ್ಟಿ ಮಾಡಿದ್ದಾರೆ. ನಾಲ್ಕು ಕೇಸ್ ನಲ್ಲಿ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಆಸ್ತಿಗಳ ಜಿಪಿಎ ಮಾಡಿದ್ದು ಬಯಲಿಗೆ ಬಂದಿದೆ. ಈ ಗ್ಯಾಂಗ್ ಒಂದು ಛಾಪಾ ಕಾಗದವನ್ನು ಐದರಿಂದ ಎಂಟು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.

ಸಧ್ಯ ಆರೋಪಿಗಳಿಂದ 118 ನಕಲಿ ಸೀಲ್ ಗಳು ವಶಪಡಿಸಿಕೊಂಡಿದ್ದಾರೆ. ನಕಲಿ ಛಾಪಾ ಕಾಗದಕ್ಕೆ ನಕಲಿ ಸೀಲ್ ಹಾಕಿ ವಂಚನೆ ಮಾಡುತ್ತಿದ್ದರು. ಆರೋಪಿಗಳ ವಂಚನೆ ಬಗ್ಗೆ ಸಿಸಿಬಿ ತನಿಖೆ ನಡೆಸಿ, ಈ ಹಗರಣವನ್ನು ಬೆಳಕಿಗೆ ತಂದಿದ್ದಾರೆ.

ಬಂಧಿತ ಆರೋಪಿಗಳು 1990, 1995, 2002 ಹಾಗೂ 2009ರ ರಿಜಿಸ್ಟರ್ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಜಿಪಿಎ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Leave A Reply

Your email address will not be published.