ಸಂಚಾರಿ ನಿಯಮ ಉಲ್ಲಂಘಿಸಿದವನಿಗೆ ಫೈನ್ ಹಾಕಿದ ಖಾಕಿ ; ದಂಡದ ಮೊತ್ತ ನೋಡಿ ಶಾಕ್ ಆಗಿಯೇ ಬಿಟ್ಟ ಸವಾರ !

ವಾಹನ ಸವಾರರಿಗಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿಯಮ ಹೊರಡಿಸಿದರೂ, ಕ್ಯಾರೇ ಅನ್ನದೆ ತಮಗೆ ಇಷ್ಟ ಬಂದ ಹಾಗೆ ಸಂಚರಿಸುತ್ತಾರೆ. ಇಂತವರಿಗಾಗಿಯೇ ಪೊಲೀಸರು ದಂಡ ನಿಗದಿ ಪಡಿಸಿದ್ದಾರೆ. ಇದೀಗ ಈ ರೀತಿ ಸರಣಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರನಿಗೆ ಚಿತ್ರದುರ್ಗ ಪೊಲೀಸರು ಶಾಕ್ ನೀಡಿದ್ದಾರೆ.

ಚಿತ್ರದುರ್ಗ ನಗರದ ಚಿಕ್ಕಪೇಟೆ ಬಡಾವಣೆ ನಿವಾಸಿ ಯುವಕ ಭರತ್ ಇತ್ತೀಚೆಗೆ ಪ್ರಮುಖ ರಸ್ತೆಯಲ್ಲಿ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೊರಟಿದ್ದ. ಅಷ್ಟೇ ಅಲ್ಲ, ಈತ ಹೆಲ್ಮೆಟ್ ಹಾಕಿರಲಿಲ್ಲ. ಡಿಎಲ್ ಸಹ ಇರಲಿಲ್ಲ ಅಲ್ಲದೆ ಆರ್‌ಸಿ ಬುಕ್ ಜೊತೆಗಿರಲಿಲ್ಲ. ಇದೆಲ್ಲದಕ್ಕಿಂತ ಮಿಗಿಲಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈತನ ವಾಹನ ಅಡ್ಡಗಟ್ಟಿದ ಪೊಲೀಸರು ದಾಖಲೆ ಪತ್ರ ಕೇಳಿದಾಗ ಅವರೊಂದಿಗೆ ವಾಗ್ವಾದಕ್ಕೂ ಇಳಿದಿದ್ದ. ಬಳಿಕ ಪೊಲೀಸರು ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ 18,000 ರೂಪಾಯಿ ದಂಡ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪ್ರಕರಣ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ನ್ಯಾಯಾಧೀಶರು 18 ಸಾವಿರ ರೂಪಾಯಿ ದಂಡ ಶುಲ್ಕ ಪಾವತಿಸಲು ಸೂಚಿಸಿದ್ದು ಒಂದು ವೇಳೆ ಪಾವತಿ ಮಾಡದಿದ್ದರೆ ಒಂದೂವರೆ ವರ್ಷಗಳ ಕಾಲ ಜೈಲುವಾಸ ಎಂದು ಹೇಳಿದ್ದಾರೆ. ಕಡೆಗೆ ಯುವಕ 18 ಸಾವಿರ ರೂಪಾಯಿ ದಂಡ ಪಾವತಿಸಿ ಜೈಲು ವಾಸದಿಂದ ಪಾರಾಗಿದ್ದಾನೆ.

ಯಾವುದೇ ವಾಹನ ಸವಾರರು ತಪ್ಪದೇ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಅದನ್ನು ಬಿಟ್ಟು ಕೇವಲ ಶೋಕಿಗೋಸ್ಕರ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ಸರಿಯಲ್ಲ. ಈ ದುಬಾರಿ ದಂಡ ಕೇವಲ ಸ್ಯಾಂಪಲ್ ಮಾತ್ರ, ಇನ್ಮುಂದೆ ಯಾವುದೇ ವಾಹನ ಸವಾರರು ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಯಾವುದೇ ಮುಲಾಜಿಲ್ಲದೇ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಖಾಕಿ ಖಡಕ್ ಸಂದೇಶ ರವಾನಿಸಿದೆ.

error: Content is protected !!
Scroll to Top
%d bloggers like this: