ಧರ್ಮಸ್ಥಳ : SDM ಶಾಲಾ ಮಾಜಿ ಶಿಕ್ಷಕಿ ಆತ್ಮಹತ್ಯೆ

Share the Article

ಉಜಿರೆಯ ಎಸ್ ಡಿ ಎಂ ನ ಮಾಜಿ ಶಾಲಾ ಶಿಕ್ಷಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡೂರು ಪಾಡಿ ನಿವಾಸಿ.

ಶಿಕ್ಷಕಿ ಚೈತ್ರ ಅಡಿಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆ ವಿವಾಹಿತರಾಗಿದ್ದು, ಪತಿ ದೀಪಕ್ ಮತ್ತು ಎಳೆಯ ಪುತ್ರಿಯೊಬ್ಬರನ್ನು ಅಗಲಿದ್ದಾರೆ. ಚೈತ್ರಾ ಅವರು ಕೆಲ ಸಮಯ ಉಜಿರೆಯಲ್ಲಿ ಎಸ್ ಡಿ ಎಂ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ತದನಂತರ ಧರ್ಮಸ್ಥಳದ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡಿದ್ದರು.

ಚೈತ್ರಾ ಅಡಿಗ ಅವರು ಕುಟುಂಬದೊಂದಿಗೆ ಧರ್ಮಸ್ಥಳದಲ್ಲಿ ವಾಸವಿದ್ದರು. ಪತಿ ಮತ್ತು ಮಾವನವರು ಪೌರೋಹಿತ್ಯ ಕೆಲಸ ಮಾಡುತ್ತಿದ್ದಾರೆ. ಚೈತ್ರಾ ಅಡಿಗ ಅವರು ಈಗ್ಗೆ 2 ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಸಾವಿಗೆ ಕಾರಣ ಇನ್ನೂ ತಿಳಿದು ಬರಬೇಕಿದೆ.

Leave A Reply