‘ಹರ್ ಘರ್ ತಿರಂಗಾ’ ಹಾಡು ಬಿಡುಗಡೆ; ದೇಶಭಕ್ತಿಯನ್ನು ಹೊಮ್ಮಿಸುವ ವೀಡಿಯೋ ಇಲ್ಲಿದೆ ನೋಡಿ
![](https://hosakannada.com/wp-content/uploads/2022/08/IMG_20220804_202921.jpg)
ನವದೆಹಲಿ: ಭಾರತ ದೇಶ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ತೇಲಾಡುತ್ತಿದ್ದು, ದೇಶ ಭಕ್ತಿ ಉಕ್ಕಿ ಹರಿಯುತ್ತಿದೆ. ಅಮೃತ ಮಹೋತ್ಸವಕ್ಕೆ ಈಗಾಗಲೇ ದಿನ ಗಣನೆ ಶುರುವಾಗಿದ್ದು, ವಿಜೃಂಭಣೆಯ ಆಚರಣೆಗೆ ಎಲ್ಲೆಡೆ ಅದ್ದೂರಿ ತಯಾರಿ ನಡೆಯುತ್ತಿದೆ.
![](https://hosakannada.com/wp-content/uploads/2024/07/First.jpeg)
ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಇದಾಗಲೇ ಹಲವರು ತಮ್ಮ ಸಾಮಾಜಿಕ ಜಾಲತಾಣದ ಡಿಪಿಗಳನ್ನು ತ್ರಿವರ್ಣ ಧ್ವಜದ ಚಿತ್ರ ಹಾಕಿಕೊಂಡಿದ್ದಾರೆ. ಇದರ ಮೂಲಕ ದೇಶದ ಮೇಲಿರುವ ಪ್ರೀತಿ, ಭಕ್ತಿಯನ್ನು ಸಾರಿ ತೋರಿಸಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಅದರ ಜೊತೆಗೆ ‘ಹರ್ ಘರ್ ತಿರಂಗಾ’ ವಾಕ್ಯ ಮೊಳಗುತ್ತಿದೆ. ಇದನ್ನು ಪಾಲಿಸುತ್ತಿರುವ ಭಾರತೀಯರು ಮನೆಗಳಲ್ಲಿ ತ್ರಿರಂಗ ಹಾರಿಸಿದ್ದಾರೆ. ಇದರ ನಡುವೆಯೇ ಇದೀಗ ಹರ್ ಘರ್ ತಿರಂಗಾ ಆಯಂಥಮ್ ಸಾಂಗ್ ಬಿಡುಗಡೆ ಆಗಿದ್ದು, ಬಹುತೇಕ ನಟರು, ಕ್ರಿಕೆಟ್ ತಾರೆಯರು, ಕ್ರೀಡಾಪಟುಗಳು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿಯೂ ಹಾಡು ಕೇಳಿಬಂದಿದ್ದು, ಕ್ರಿಕೆಟಿಗ ಕೆ.ಎಲ್ರಾಹುಲ್ ಇದನ್ನು ಹೇಳಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ, ಭಾರತದ ಬಹುತೇಕ ಎಲ್ಲಾ ಭಾಷೆಗಳನ್ನು ಈ ಹಾಡಿನಲ್ಲಿ ನಾವು ಕೇಳಬಹುದಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಅಜಯ್ ದೇವಗನ್, ಕೀರ್ತಿ ಸುರೇಶ್, ಅನುಷ್ಕಾ ಶರ್ಮಾ, ಪಿ.ವಿ ಸಿಂಧು ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋ Ministry Of culture ಪೇಜ್ ನಲ್ಲಿ ಬಿಡುಗಡೆಯಾಗಿದ್ದು, ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ದೇಶಭಕ್ತಿಯನ್ನು ಹೊಮ್ಮಿಸುವ ಈ ಹಾಡನ್ನೂ ನೀವೂ ಕೇಳಿ, ದೇಶದ ಗೌರವವನ್ನೂ ಹೆಚ್ಚಿಸಿಕೊಳ್ಳಿ.